ನವದೆಹಲಿ: ಕಾಲಕ್ಕೆ ತಕ್ಕಂತೆ ಬದುಕು ಬದಲಾಗತೊಡಗಿದ್ದು, ಹಿಂದಿನ ಕಾಲದಲ್ಲಿ ಮನೆಯ ಹೊರಭಾಗದಲ್ಲಿ ಆಡುತ್ತಿದ್ದ ಕೆಲ ಕ್ರೀಡೆಗಳನ್ನು ಈಗ ಮನೆಯ ಒಳಭಾಗದಲ್ಲಿ ಆಡುತ್ತಿದ್ದೇವೆ. ಅಂದರೆ, ಹೊರಾಂಗಣದಲ್ಲಿ ಆಡಲಾಗುವ ಕ್ರಿಕೆಟ್, ಫುಟ್ಬಾಲ್ನಂತಹ ಆಟಗಳನ್ನು ನಾವು ಇಂದು ನಮ್ಮ ಸ್ಮಾರ್ಟ್ ಫೋನ್ನಲ್ಲಿ ಆಡುವ ಮೂಲಕ ಸಂತಸ ಪಡುತ್ತಿದ್ದೇವೆ. ಮೊಬೈಲ್ ಮೂಲಕ ಗೇಮ್ ಆಡುವುದರಿಂದ ಮನಸ್ಸಿಗೆ ಸಂತಸ ಉಂಟಾಗುತ್ತದೆ ಆದರೆ ದೇಹಕ್ಕಲ್ಲ. ಹೀಗಿದ್ದರೂ ಅದೆಷ್ಟೋ ಜನಕ್ಕೆ ಈ ಗೇಮಿಂಗ್ನಿಂದ ಉದ್ಯೋಗವಕಾಶ ದೊರೆತಿರುವುದು ಸುಳ್ಳಲ್ಲ.
ಭಾರತೀಯ ಗೇಮಿಂಗ್ ಉದ್ಯಮದ ನೇಮಕ ಚಟುವಟಿಕೆಯಲ್ಲಿ ದಿನೇ ದಿನೆ ಏರಿಕೆ ಕಾಣತೊಡಗಿದ್ದು, ಮೊಬೈಲ್ನಲ್ಲಿ ಗೇಮ್ ಆಡುವವರ ಸಂಖ್ಯೆ ಹೆಚ್ಚಳವಾದಂತೆ ಆ ಕಂಪನಿಯು ಸಹ ಕೆಲಸ ನಿರ್ವಹಿಸಲೆಂದು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹೆಚ್ಚಿಸಿದೆ. 2020ರ ಜನವರಿ ವೇಳೆಗೆ ಗೇಮಿಂಗ್ ವಲಯದ ಉದ್ಯೋಗವಕಾಶದಲ್ಲಿ 13 ರಿಂದ 15 ಪ್ರತಿಶತದಷ್ಟು ಹೆಚ್ಚಾಗಿತ್ತು, ಆದರೆ ತದನಂತರ ಕೊರೊನಾದಿಂದಾಗಿ ಈ ಸಂಖ್ಯೆ ಕೊಂಚ ಮಟ್ಟಿಗೆ ಇಳಿಕೆ ಕಂಡಿತ್ತು. ಆದರೆ, ಇದೀಗ ಕೊರೊನಾ ರೋಗ ಕಣ್ಮರೆಯಾಗತೊಡಗಿದ್ದು, ಗೇಮಿಂಗ್ ಉದ್ಯಮದ ನೇಮಕ ಚಟುವಟಿಕೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದುಪ್ಪಾಟ್ಟಾಗಿದೆ.
ತಂತ್ರಜ್ಞಾನ, ದೂರಸಂಪರ್ಕ, ಮಾರ್ಕೆಟಿಂಗ್ ನಂತಹ ಕ್ಷೇತ್ರಗಳಲ್ಲಿಯೂ ಸಹ ಕೊರೊನಾ ನೀಡಿರುವ ಪೆಟ್ಟಿನಿಂದಾಗಿ ತೀವ್ರ ಏರಿಳಿಕೆ ಕಾಣತೊಡಗಿದೆ. ಆದರೆ, ಸದ್ಯದ ಮಟ್ಟಿಗೆ ಗೇಮಿಂಗ್ ಉದ್ಯಮವು ಭಾರತದಲ್ಲಿ ಬೃಹತ್ ಉದ್ಯೋಗವನ್ನು ಗಳಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ.