ಮುಂಬೈ:ಸ್ವದೇಶಿ ನಿರ್ಮಿತ ಕ್ಷಿಪಣಿ ಉಡ್ಡಯನ ಹಾಗೂ ಧ್ವಂಸ ಮಾಡಬಲ್ಲ (India's first stealth guided-missile destroyer) ಅತ್ಯಾಧುನಿಕ ಯುದ್ಧ ಕೌಶಲ್ಯಗಳ ಐಎನ್‌ಎಸ್ ವಿಶಾಖಪಟ್ಟಣಂ ನೌಕೆ ಇಂದು ಲೋಕಾರ್ಪಣೆಯಾಗುತ್ತಿದೆ.
ಸ್ವದೇಶಿ ನಿರ್ಮಿತ ಅತ್ಯಾಧುನಿಕ ಯುದ್ಧ ನೌಕೆ 'ಐಎನ್‌ಎಸ್ ವಿಶಾಖಪಟ್ಟಣಂ' ಇಂದು ಲೋಕಾರ್ಪಣೆ - ಆತ್ಯಾಧುನಿಕ ಯುದ್ಧ ನೌಕೆ ಐಎನ್‌ಎಸ್ ವಿಶ್ವಖಪಟ್ಟಣಂ
ಕ್ಷಿಪಣಿಗಳ ಉಡ್ಡಯನ ಹಾಗೂ ಧ್ವಂಸ ಮಾಡಬಲ್ಲ ಅತ್ಯಾಧುನಿಕ ಯುದ್ಧ ಕೌಶಲ್ಯ ಹೊಂದಿರುವ ಐಎನ್‌ಎಸ್ ವಿಶಾಖಪಟ್ಟಣಂ (INS Visakhapatnam) ನೌಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಭಾರತೀಯ ನೌಕಾದಳಕ್ಕೆ ಹಸ್ತಾಂತರಿಸಲಿದ್ದಾರೆ.
ದೇಶದ ಮೊದಲ ಸ್ವದೇಶಿ ನಿರ್ಮಿತ ಆತ್ಯಾಧುನಿಕ ಯುದ್ಧ ನೌಕೆ 'ಐಎನ್‌ಎಸ್ ವಿಶ್ವಖಪಟ್ಟಣಂ' ಇಂದು ಲೋಕಾರ್ಪಣೆ
ಮಡಗಾಂವ್ ಡಾಕ್ ಲಿ.ಸಂಸ್ಥೆ ನಿರ್ಮಾಣ ಮಾಡಿರುವ ಈ ಅತ್ಯಾಧುನಿಕ ಯುದ್ಧ ನೌಕೆ 163 ಮೀಟರ್ ಉದ್ದ ಹಾಗೂ 7,400 ಟನ್ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
ಭೂಮಿಯಿಂದ ಭೂಮಿಗೆ, ಭೂಮಿಯಿಂದ ಆಗಸಕ್ಕೆ ಹಾರಿಸಲ್ಲ ಕ್ಷಿಪಣಿ ವ್ಯವಸ್ಥೆ ಇದರಲ್ಲಿದೆ. 7,408 ಕಿ.ಮೀ ದೂರದವರೆಗೆ ಚಲಿಸುವ ಹಾಗೂ ಎಂತಹದ್ದೇ ಕಠಿಣ ಪರಿಸ್ಥಿತಿಯಲ್ಲೂ ಸತತ 42 ದಿನ ಕಾರ್ಯಾಚರಣೆ ಮಾಡಬಲ್ಲ ಸಾಮರ್ಥ್ಯವೂ ಇದಕ್ಕಿದೆ. ಗಂಟೆಗೆ 55 ಕಿ.ಮೀ ವೇಗ ಹಾಗೂ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧ ಸಾಮಗ್ರಿಗಳನ್ನು ಹೊಂದಿರುವ ಮೊದಲ ಸ್ವದೇಶಿ ನಿರ್ಮಿತ ನೌಕೆ ಕೂಡಾ ಇದಾಗಿದೆ.
Last Updated : Nov 21, 2021, 8:52 AM IST