ಮುಂಬೈ: ಐಎನ್ಎಸ್ ವಿಕ್ರಾಂತ್ ಹಗರಣ ಪ್ರಕರಣದಲ್ಲಿ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಮತ್ತು ಮಗ ನೀಲ್ ಸೋಮಯ್ಯಗೆ ಮುಂಬೈ ಆರ್ಥಿಕ ಅಪರಾಧ ದಳ ಕ್ಲೀನ್‌ಚಿಟ್ ನೀಡಿದೆ. ಈ ಕುರಿತು ಮುಂಬೈ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ವರದಿ ಸಲ್ಲಿಸಲಾಗಿದ್ದು, ತಂದೆ ಮತ್ತು ಮಗನ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಉಲ್ಲೇಖಿಸಲಾಗಿದೆ.
ಐಎನ್ಎಸ್ ವಿಕ್ರಾಂತ್ ಬಚಾವ್ ಎಂಬ ಹೆಸರಿನಲ್ಲಿ ಇವರು ಮುಂಬೈನಲ್ಲಿ ಪ್ರಚಾರ ನಡೆಸಿದ್ದು, ಸುಮಾರು 57 ಕೋಟಿ ರೂ ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಹಣವನ್ನು ಅವರು ನಿಕೋನ್ ಇನ್ಫ್ರಾ ಕಂಪನಿಗೆ ಬಳಸಿದ್ದರು ಎನ್ನಲಾಗಿತ್ತು. ನಿವೃತ್ತ ಸೇನಾಧಿಕಾರಿ ಬಾಬನ್ ಭೋಸಲೆ ಏಪ್ರಿಲ್ 7, 2022ರಂದು ಈ ಕುರಿತು ದೂರು ದಾಖಲಿಸಿದ್ದರು. ಥ್ರೊಂಬೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 429, 406 ಮತ್ತು 34ರ ಅಡಿ ಪ್ರಕರಣ ದಾಖಲಾಗಿತ್ತು. ಇದಾದ ನಂತರ ಪ್ರಕರಣವನ್ನು ಮುಂಬೈ ಆರ್ಥಿಕ ಅಪರಾಧ ದಳಕ್ಕೆ ವರ್ಗಾಯಿಸಲಾಗಿತ್ತು.