ಕರ್ನಾಟಕ

karnataka

ETV Bharat / bharat

ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ.. ಆಪ್​ ಶಾಸಕನ ಮೇಲೆ ಇಂಕ್ ಎಸೆದ ಅಪರಿಚಿತ - ಆಪ್ ಶಾಸಕ ಸೋಮನಾಥ ಭಾರತಿ ಇಂಕ್ ಎಸೆದ ಜನ

ಸೋಮನಾಥ ಭಾರತಿ, ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನೀರಾವರಿ ವಿಭಾಗದ ಅತಿಥಿ ಗೃಹಕ್ಕೆ ತೆರಳುತ್ತಿದ್ದ ವೇಳೆ ಯಾರೋ ಅಪರಿಚಿತರು ಶಾಯಿ (ಇಂಕ್) ಬಾಟಲ್ ಎಸೆದಿದ್ದಾರೆ..

ಅಪರಿಚಿತ
ಅಪರಿಚಿತ

By

Published : Jan 11, 2021, 4:24 PM IST

ರಾಯ್​ಬರೇಲಿ (ಉತ್ತರಪ್ರದೇಶ) :ದೆಹಲಿಯಲ್ಲಿ ಗದ್ದುಗೆ ಏರಿರುವ ಆಪ್ ಪಕ್ಷ, ಉತ್ತರಪ್ರದೇಶದಲ್ಲೂ ಬೇರೂರಲು ನಿರಂತರವಾಗಿ ಯತ್ನಿಸುತ್ತಿದೆ. ಹೀಗಾಗಿ, ಇಂದು ರಾಯ್​ಬರೇಲಿಗೆ ಭೇಟಿ ನೀಡಿರುವ ಶಾಸಕ ಸೋಮನಾಥ ಭಾರತಿ, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಈ ಹಿಂದೆಯೂ ಅವರು, ಉತ್ತರಪ್ರದೇಶದ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳು ‘ನಾಯಿ ಮಕ್ಕಳು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸೋಮನಾಥ ಭಾರತಿ, ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ನೀರಾವರಿ ವಿಭಾಗದ ಅತಿಥಿ ಗೃಹಕ್ಕೆ ತೆರಳುತ್ತಿದ್ದ ವೇಳೆ ಯಾರೋ ಅಪರಿಚಿತರು ಶಾಯಿ (ಇಂಕ್) ಬಾಟಲ್ ಎಸೆದಿದ್ದಾರೆ. ಈ ಮೊದಲೇ ಶಾಸಕರ ಹೇಳಿಕೆಗಳಿಂದ ಅಸಮಾಧಾನಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಮಾಡಿದ್ದರು ಎನ್ನಲಾಗ್ತಿದೆ.

ABOUT THE AUTHOR

...view details