ಕರ್ನಾಟಕ

karnataka

By

Published : Apr 12, 2021, 9:40 AM IST

ETV Bharat / bharat

ಗಡ್ಚಿರೋಲಿ ಎನ್​ಕೌಂಟರ್: ಗಾಯಗೊಂಡು ತಲೆಮರೆಸಿಕೊಂಡಿದ್ದ ನಕ್ಸಲ್ ಬಂಧನ

ಮಾರ್ಚ್ 29 ರಂದು ಗಡ್ಚಿರೋಲಿ ಪೊಲೀಸರೊಂದಿಗೆ ನಡೆದ ಎನ್​ಕೌಂಟರ್​ನಲ್ಲಿ ಗಾಯಗೊಂಡು ತಲೆಮರೆಸಿಕೊಂಡಿದ್ದ ನಕ್ಸಲ್​ನನ್ನು ಬಂಧಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಗಾಗಿ ನಕ್ಸಲ್​ ಕಾವ್ಡೊ ಅವರನ್ನು ಗಡ್ಚಿರೋಲಿಗೆ ಕರೆತರಲಾಗಿದ್ದು, ಬಳಿಕ ನಾಗ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಆತನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಮಾಹಿತಿ ನೀಡಿದ್ದಾರೆ.

Injured Naxal hiding in village post Gadchiroli encounter held
ಎನ್​ಕೌಂಟರ್​ನಲ್ಲಿ ಗಾಯಗೊಂಡು ತಲೆಮರೆಸಿಕೊಂಡಿದ್ದ ನಕ್ಸಲ್ ಬಂಧನ

ನಾಗ್ಪುರ:ಮಾರ್ಚ್ 29 ರಂದು ಗಡ್ಚಿರೋಲಿ ಪೊಲೀಸರೊಂದಿಗೆ ನಡೆದ ಎನ್​ಕೌಂಟರ್​ನಲ್ಲಿ ಗಾಯಗೊಂಡು ತಲೆಮರೆಸಿಕೊಂಡಿದ್ದ ನಕ್ಸಲ್​ಅನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಈ ಎನ್ಕೌಂಟರ್ ಖೋಬ್ರಮೇಂಡಾ ಕಾಡಿನಲ್ಲಿ ನಡೆದಿದ್ದು, ಐವರು ನಕ್ಸಲರು ಹತರಾಗಿದ್ದರು. ನಕ್ಸಲರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಗಾಯಗೊಂಡ ನಕ್ಸಲರನ್ನು ಬಿಟ್ಟು ಓಡಿಹೋಗಿದ್ದರು ಎಂಬ ಮಾಹಿತಿ ಬಂದಿದೆ ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ಹೇಳಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ, ಏಪ್ರಿಲ್ 6 ರಂದು ತಲೆಮರೆಸಿಕೊಂಡಿದ್ದ ನಕ್ಸಲ್ ಕಿಶೋರ್ ಕಾವ್ಡೊ ಅಡಗಿದ್ದ ಕ್ಯಾಥೆಜಾರಿ ಗ್ರಾಮದಿಂದ ಆತನನ್ನು ಬಂಧಿಸಿದ್ದೇವೆ ಎಂದು ಗಡ್ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ:ನಕ್ಸಲರ ಅಟ್ಟಹಾಸ: ವಾಟರ್ ಫಿಲ್ಟರ್ ಪ್ಲಾಂಟ್ ನಿರ್ಮಾಣದಲ್ಲಿ ತೊಡಗಿದ್ದ ವಾಹನಗಳಿಗೆ ಬೆಂಕಿ

ಪ್ರಾಥಮಿಕ ಚಿಕಿತ್ಸೆಗಾಗಿ ಕಾವ್ಡೊ ಅವರನ್ನು ಗಡ್ಚಿರೋಲಿಗೆ ಕರೆತರಲಾಗಿದ್ದು, ಬಳಿಕ ನಾಗ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ಕಾವ್ಡೊಗೆ ಸಹಾಯ ಮಾಡಿದ್ದಕ್ಕಾಗಿ ಗಣೇಶ್ ಕೋಲ್ ಎಂಬ ವ್ಯಕ್ತಿಯನ್ನು ಸಹ ಬಂಧಿಸಲಾಗಿದೆ.

For All Latest Updates

TAGGED:

ABOUT THE AUTHOR

...view details