ಕೇಂದ್ರಪಾರಾ(ಒಡಿಶಾ): ಮನೆ ಮಾಲೀಕನೊಬ್ಬ ತನ್ನ ಸಾಕು ನಾಯಿಯ ಮೇಲೆ ಮಚ್ಚಿನಿಂದ ಹೊಡೆದು ಸಾಯಿಸಿರುವ ಘಟನೆ ರಾಜ್ಯದ ಕೇಂದ್ರಪಾರಾ ಜಿಲ್ಲೆಯ ಪಟಮುಂಡೈ ಗ್ರಾಮದಲ್ಲಿ ನಡೆದಿದೆ.
ಮನೆಯಂಗಳದಲ್ಲಿ ಸಾಕು ನಾಯಿ ಮಲಗಿದೆ. ಮಾಲೀಕ ಬಬುಲಾ ಸಿಂಗ್ ಈ ನಾಯಿ ಬಳಿ ಬಂದಿದ್ದಾನೆ. ಬಳಿಕ ತಾನು ತಂದಿದ್ದ ಚೂಪಾದ ಮಚ್ಚಿನಿಂದ ಅದಕ್ಕೆ ಹೊಡೆದಿದ್ದಾನೆ. ಮಚ್ಚಿನೇಟಿನಿಂದಾಗಿ ತೀವ್ರವಾಗಿ ಗಾಯಗೊಂಡ ಶ್ವಾನ ವಿಲವಿಲನೆ ಒದ್ದಾಡಿ ಸ್ವಲ್ಪ ಸಮಯದ ಬಳಿಕ ಪ್ರಾಣ ಬಿಟ್ಟಿತು.