ನವದೆಹಲಿ:ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕೃತ ಟ್ವಿಟರ್ ಖಾತೆಯನ್ನು ಬುಧವಾರ ಬೆಳಗ್ಗೆ ಹ್ಯಾಕ್ ಮಾಡಿದ್ದು, ಹ್ಯಾಕ್ ಮಾಡಿದ ನಂತರ ಹ್ಯಾಕರ್ಗಳು ಅಮೇಜಿಂಗ್ (Amazing), ಹರ್ರಿ ಅಪ್ (Hurry up), ಗ್ರೇಟ್ ಜಾಬ್(Great Job) ಮುಂತಾದ ಅಸಂಬದ್ಧ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ ಅವರ ಥಂಬ್‌ನೇಲ್ ಇರುವ ಕೆಲವು ಹೈಪರ್ಲಿಂಕ್ಗಳನ್ನು ಪೋಸ್ಟ್ ಮಾಡಲಾಗಿದ್ದು, 50ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್: ಅಮೇಜಿಂಗ್, ಹರ್ರಿ ಅಪ್ ಟ್ವೀಟ್ - ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ಸರ್ಕಾರದ ಸಚಿವಾಲಯವೊಂದರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಹ್ಯಾಕರ್ಗಳು ಅಮೇಜಿಂಗ್, ಹರ್ರಿ ಅಪ್ ಮುಂತಾದ ಟ್ವೀಟ್ಗಳನ್ನು ಮಾಡಿದ್ದಾರೆ.
![ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್: ಅಮೇಜಿಂಗ್, ಹರ್ರಿ ಅಪ್ ಟ್ವೀಟ್ MIB Twitter handle compromised, posts over 50 ''Hurry up' tweets](https://etvbharatimages.akamaized.net/etvbharat/prod-images/768-512-14163794-1097-14163794-1641964617251.jpg)
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಹ್ಯಾಂಡಲ್ ಹ್ಯಾಕ್
ಹ್ಯಾಕ್ ಆಗಿರುವುದು ತಿಳಿದುಬಂದ ನಂತರ ಹ್ಯಾಕರ್ಗಳು ಮಾಡಲಾಗಿದ್ದ ಟ್ವೀಟ್ಗಳನ್ನು ಅಳಿಸಿ ಹಾಕಲಾಗಿದೆ. @Mib_india ಖಾತೆಯನ್ನು ಮರುಸ್ಥಾಪಿಸಲಾಗಿದೆ. ಇದು ಎಲ್ಲ ಫಾಲೋವರ್ಸ್ಗಳ ಮಾಹಿತಿಗಾಗಿ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟ್ವೀಟ್ ಮಾಡಿದೆ.
ಇದನ್ನೂ ಓದಿ:Pm Security Breach: ಪ್ರಧಾನಿ ಭದ್ರತಾ ಲೋಪ ಕುರಿತಂತೆ ಸುಪ್ರೀಂನಿಂದ ಹೊಸ ಸಮಿತಿ ನೇಮಕ