ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಪುಣೆಯಲ್ಲಿ ಆತಂಕದ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೊಬೈಲ್ನಲ್ಲಿ ಹಾರರ್ ವಿಡಿಯೋಗಳನ್ನು ನೋಡಿ ಅದರಿಂದಲೇ ಪ್ರಭಾವಿತನಾದ ಎಂಟು ವರ್ಷದ ಬಾಲಕನೋರ್ವ ಗೊಂಬೆಗೆ ನೇಣು ಬಿಗಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಣೆಯ ಪಿಂಪ್ರಿ-ಚಿಂಚ್ವಾಡ್ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಈ ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ಮನೆಯಲ್ಲಿ ತಾಯಿ ತನ್ನ ಕೆಲಸದಲ್ಲಿ ತೊಡಗಿದ್ದಾಗ ಈ ಬಾಲಕ ಆಟವಾಡುವಾಗ ಮೊದಲು ತನ್ನ ಬಳಿಯಿದ್ದ ಗೊಂಬೆಗೆ ಬಟ್ಟೆಯಿಂದ ಕುತ್ತಿಗೆ ಬಿಗಿದಿದ್ದಾನೆ. ಇದರಿಂದ ಆ ಗೊಂಬೆ ಸತ್ತಿದೆ ಎಂದು ತಿಳಿದು, ನಂತರ ಅದೇ ಬಟ್ಟೆಯನ್ನು ತನ್ನ ಬಾಯಿಯಲ್ಲಿ ತುರುಕಿಕೊಂಡು ಹಾಗೂ ಮುಖಕ್ಕೆ ಸುತ್ತಿಕೊಂಡಿದ್ದಾನೆ. ಪರಿಣಾಮ ಅಲ್ಲಿಯೇ ಉಸಿರುಗಟ್ಟಿ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.