ಕರ್ನಾಟಕ

karnataka

2024ನೇ ಆರ್ಥಿಕ ಸಾಲಿನಲ್ಲಿ ದೇಶ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಿದ್ಧ: ಮುಖ್ಯ ಆರ್ಥಿಕ ಸಲಹೆಗಾರ

By

Published : Jan 31, 2023, 9:49 PM IST

2022-23ರ ಆರ್ಥಿಕ ಸಮೀಕ್ಷೆ ಕುರಿತ ಮಾತನಾಡಿರುವ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ.ಅನಂತ ನಾಗೇಶ್ವರನ್, ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

inflation-likely-to-be-well-behaved-economy-poised-to-do-better-in-fy24-cea-dr-va-nageswaran
2024ನೇ ಆರ್ಥಿಕ ಸಾಲಿನಲ್ಲಿ ದೇಶ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಿದ್ಧ: ಮುಖ್ಯ ಆರ್ಥಿಕ ಸಲಹೆಗಾರ

ನವದೆಹಲಿ:2024ನೇ ಆರ್ಥಿಕ ಸಾಲಿನಲ್ಲಿ ದೇಶದ ಹಣದುಬ್ಬರದ ಪರಿಸ್ಥಿತಿ ಸುಧಾರಿಸಲಿದೆ. ಈ ದಶಕದ ಉಳಿದ ವರ್ಷಗಳಲ್ಲಿ ದೇಶ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಡಾ. ವಿ.ಅನಂತ ನಾಗೇಶ್ವರನ್ ಮಂಗಳವಾರ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ವರದಿಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ನಾಳೆ ಕೇಂದ್ರ ಸರ್ಕಾರವು ಪೂರ್ಣ ಪ್ರಮಾಣದ ಬಜೆಟ್​ ಮಂಡಿಸಲಿದೆ. ಇದಕ್ಕೂ ಮುಂಚಿತವಾಗಿ ಇಂದು ಸಂಸತ್ತಿನಲ್ಲಿ 2022-23ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗಿದೆ. ಈ ಆರ್ಥಿಕ ಸಮೀಕ್ಷೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಅನಂತ ನಾಗೇಶ್ವರನ್, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯು ಶೇ.6.8ರಲ್ಲಿ ಮುಂದುವರೆಯಲಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಶೇ.6.1ಕ್ಕೆ ಕುಸಿದರೂ, ತದನಂತರದ 2024-25ನೇ ಆರ್ಥಿಕ ಸಾಲಿನಲ್ಲಿ ಶೇ.6.8ಕ್ಕೆ ಚೇತರಿಸಿಕೊಳ್ಳಲಿದೆ ಎಂದು ತಿಳಿಸಿದೆ.

ಅಲ್ಲದೇ, ಕೋವಿಡ್​ ಸಾಂಕ್ರಾಮಿಕ ರೋಗ ಹಾಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಉಂಟಾದ ಜಾಗತಿಕ ಆಘಾತಗಳು ಸ್ವಲ್ಪಮಟ್ಟಿಗೆ ತಗ್ಗಿದ ಕಾರಣ ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ದೇಶದ ಉದ್ಯೋಗ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ನಿರುದ್ಯೋಗ ಅನುಪಾತವು ಶೇ.7ಕ್ಕೆ ಇಳಿದಿದೆ. ಆದರೆ, ಕಾರ್ಮಿಕರ ಜನಸಂಖ್ಯೆಯ ಅನುಪಾತವು ಶೇ.45ಕ್ಕೆ ಏರಿದೆ ಎಂದು ತಿಳಿಸಿದರು.

ನಿರೀಕ್ಷೆಯಂತೆ ಜಿಡಿಪಿ ಬೆಳವಣಿಗೆ:ತೈಲ ಬೆಲೆಗಳು ಬ್ಯಾರೆಲ್​ಗೆ ಅಮೆರಿಕದ 100 ಡಾಲರ್​ಗಿಂತ ಕಡಿಮೆ ಇರುವವರೆಗೂ, ಯೋಜಿತ ಬೆಳವಣಿಗೆಯ ದರವು ಅಡೆತಡೆಯಿಲ್ಲದೆ ಮುಂದುವರೆಯುತ್ತದೆ. ಮುಂಬರುವ ಹಣಕಾಸು ವರ್ಷದಲ್ಲಿ ನಿರೀಕ್ಷೆಯಂತೆ ಜಿಡಿಪಿ ಬೆಳವಣಿಗೆ ಆಗಲಿದೆ ಎಂದು ಅನಂತ ನಾಗೇಶ್ವರನ್ ಆಶಾಭಾವ ವ್ಯಕ್ತಪಡಿಸಿದರು. ಮತ್ತೊಂದೆಡೆ, ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭವು ದೇಶದಲ್ಲಿ ಗುಣಮಟ್ಟದ ಆರೋಗ್ಯವನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರ ಕೈಗೊಂಡ ವ್ಯಾಪಕ ಪ್ರಯತ್ನಗಳನ್ನು ಎತ್ತಿ ತೋರಿಸುತ್ತದೆ. ಅದರಲ್ಲೂ, ಕೋವಿಡ್​ ಲಸಿಕೆ ಕಾರ್ಯಕ್ರಮವು ನಮ್ಮ ಆರ್ಥಿಕ ಚೇತರಿಕೆ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಪ್ರಮುಖವಾಗಿದೆ ಎಂದು ವಿವರಿಸಿದರು.

ಸರ್ಕಾರವು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಹೆಚ್ಚು ವೆಚ್ಚ ಮಾಡುತ್ತಿದೆ. ಇದರ ಪರಿಣಾಮ ಮಕ್ಕಳ ಶಾಲೆ ಬಿಡುವ ಪ್ರಮಾಣ ತಗ್ಗುತ್ತದೆ ಮತ್ತು ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತದಂತಹ ಸುಧಾರಿತ ಫಲಿತಾಂಶಗಳಿಗೆ ಕಾರಣವಾಗುತ್ತದೆ. ಸಾಮಾಜಿಕ ಮೂಲಸೌಕರ್ಯಗಳನ್ನು ಬಲಪಡಿಸುವಲ್ಲೂ ಸರ್ಕಾರ ಗಣನೀಯವಾದ ಕ್ರಮ ವಹಿಸಿವೆ. ಬಜೆಟ್ ಕೊರತೆ ಅಂಕಿ-ಅಂಶಗಳೊಂದಿಗೆ ಸರ್ಕಾರವು ಹೆಚ್ಚು ಪಾರದರ್ಶಕವಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ, ಸರ್ಕಾರದ ಆರ್ಥಿಕ ಸುಧಾರಣೆಗಳು ಮತ್ತು ನೀತಿಗಳಿಂದಾಗಿ ಆರ್ಥಿಕತೆಯ ಮೇಲೆ ಆಂತರಿಕ ಮತ್ತು ಬಾಹ್ಯ ಋಣಾತ್ಮಕ ಪರಿಣಾಮಗಳನ್ನು ತಡೆಯಬಹುದಾಗಿದೆ. ಈ ಆರ್ಥಿಕ ಸುಧಾರಣೆಗಳು ಹೆಚ್ಚಿನ ಬೆಳವಣಿಗೆಗೆ ಕಾರಣವಾಗುವುದಿಲ್ಲ. ಆದರೆ, ಅಂತರ್ಗತ ಬೆಳವಣಿಗೆಗೆ ಕಾರಣವಾಗುತ್ತವೆ. ಒಟ್ಟಾರೆ ಒಟ್ಟು ಬಂಡವಾಳ ರಚನೆಯ ಶೇ.9.3ರಷ್ಟು ಖಾಸಗಿ ವಲಯದಿಂದ ಕೊಡುಗೆ ನೀಡುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಕೃಷಿ ವಲಯವು ರಫ್ತು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ. ಕೃಷಿಯಲ್ಲಿ ಖಾಸಗಿ ವಲಯದ ಹೂಡಿಕೆಯ ಪಾಲು ಕಳೆದ 12 ವರ್ಷಗಳಲ್ಲಿ ಅತ್ಯಧಿಕ ಮಟ್ಟವನ್ನು ತಲುಪಿದೆ ಎಂದು ವಿವರಣೆ ನೀಡಿದರು.

ಇದನ್ನೂ ಓದಿ:2023ರಲ್ಲಿ ಭಾರತದ ಆರ್ಥಿಕ ದರ 6.1ಕ್ಕೆ ಕುಸಿತ: ಐಎಂಎಫ್​ ವರದಿ

ABOUT THE AUTHOR

...view details