ನವದೆಹಲಿ: ದೀಪಾವಳಿ ವೇಳೆ ಹಣದುಬ್ಬರ ಉತ್ತುಂಗದಲ್ಲಿದೆ. ಸರ್ಕಾರವು ಜನರಿಗಾಗಿ ಸಂವೇದನಾಶೀಲ ಹೃದಯ ಹೊಂದಬೇಕು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದ್ದಾರೆ.
ದೀಪಾವಳಿ ವೇಳೆ ಹಣದುಬ್ಬರ ಉತ್ತುಂಗದಲ್ಲಿದೆ: ಕೇಂದ್ರದ ವಿರುದ್ಧ ರಾಹುಲ್ ಕಿಡಿ - ಪ್ರಧಾನಿ ಮೋದಿ
ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ದೀಪಾವಳಿ ವೇಳೆ ಹಣದುಬ್ಬರ ಉತ್ತುಂಗದಲ್ಲಿದೆ. ಮೋದಿ ಸರ್ಕಾರ ಜನರಿಗಾಗಿ ಸಂವೇದನಾಶೀಲ ಹೃದಯ ಹೊಂದಬೇಕು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಸತತವಾಗಿ ಇಂಧನ ಬೆಲೆ ಏರಿಕೆಯಾಗುತ್ತಿದೆ. ಕಳೆದ ಏಳು ದಿನಗಳಿಂದ ನಿರಂತರವಾಗಿ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಕೇಂದ್ರವನ್ನು ಟೀಕಿಸಿದ್ದಾರೆ.
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 110.04 ಮತ್ತು 98.42 ರೂಪಾಯಿ ಇದೆ. ಮುಂಬೈನಲ್ಲಿ ಪೆಟ್ರೋಲ್ 115.85 ರೂ. ಹಾಗೂ ಡೀಸೆಲ್ 106.62 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ ಪೆಟ್ರೋಲ್ 110.49 ರೂ. ಹಾಗೂ ಡೀಸೆಲ್ 101.56 ರೂ. ಮಾರಾಟ ವಾಗುತ್ತಿದೆ. ಚೆನ್ನೈನಲ್ಲಿ ಕ್ರಮವಾಗಿ ರೂ 106.66 ಮತ್ತು ರೂ 102.59 ರೂ. ಇದೆ. ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 266 ರೂಪಾಯಿ ಹೆಚ್ಚಳ ಮಾಡಲಾಗಿದೆ.