ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯ ವಾಸ್ತವ ನಿಯಂತ್ರಣ ರೇಖೆಯ ಬಳಿ ದೇಶದೊಳಗೆ ನುಸುಳಲು ಯತ್ನಿಸುತ್ತಿದ್ದ ಉಗ್ರಗಾಮಿಯೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಾರ್ಯಾಚರಣೆಯಲ್ಲಿ ಭಾರತದ ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಭಾರತದ ಗಡಿಯೊಳಗೆ ನುಸುಳಲೆತ್ನಿಸಿದ ಉಗ್ರ ಹತ, ಓರ್ವ ಯೋಧ ಹುತಾತ್ಮ - ಭಾರತ ಪಾಕಿಸ್ತಾನ ಗಡಿರೇಖೆ
ಜಮ್ಮು ಕಾಶ್ಮೀರದಲ್ಲಿ ಉಗ್ರನಿಗ್ರಹ ಕಾರ್ಯಾಚರಣೆ ಮುಂದುವರೆದಿದೆ. ಪಾಕಿಸ್ತಾನದಿಂದ ಭಾರತಕ್ಕೆ ನುಸುಳುತ್ತಿದ್ದ ಉಗ್ರನಿಗೆ ಭದ್ರತಾ ಪಡೆಗಳು ತಕ್ಕ ಪಾಠ ಕಲಿಸಿವೆ.
Etv Bharatಭಾರತದ ಗಡಿಯೊಳಗೆ ನುಸುಳಲೆತ್ನಿಸಿದ ಉಗ್ರ ಹತ
ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗುರನ್ ನಾಲ್ಲಾ ಅಮ್ರೋಹಿ ಬಳಿಯ ನಿಯಂತ್ರಣ ರೇಖೆಯ ಬಳಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಎಕೆ ರೈಫಲ್, ಮೂರು ಎಕೆ ಮ್ಯಾಗಜೀನ್ಗಳು, 200 ಎಕೆ ರೌಂಡ್ಸ್, ಮೂರು ಪಿಸ್ತೂಲು, ನಾಲ್ಕು ಪಿಸ್ತೂಲ್ ಮ್ಯಾಗಜೀನ್ಗಳು ಮತ್ತು ನಾಲ್ಕು ಹ್ಯಾಂಡ್ ಗ್ರೆನೇಡ್ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಗ್ರಗಾಮಿಗಳ ವಿರುದ್ಧದ ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.