ಕರ್ನಾಟಕ

karnataka

ETV Bharat / bharat

ಎದೆಹಾಲು ಕುಡಿಯುತ್ತಲೇ ಮಗು ಪ್ರಾಣ ಬಿಡುವುದುಂಟೇ? ಕೇರಳದಲ್ಲಿ ನಡೀತು ವಿಚಿತ್ರ ಘಟನೆ! - ಇಡುಕ್ಕಿಯಲ್ಲಿ ತಾಯಿ ಹಾಲು ಕುಡಿಯುತ್ತಲೇ ಮಗು ಸಾವು,

ಇಡುಕ್ಕಿಯ ಜಿಜಿನ್-ತಿನೋಲ್ ಎಂಬ ದಂಪತಿಯ ಎರಡೂವರೆ ತಿಂಗಳ ಗಂಡು ಮಗುವಿಗೆ ಹಾಲು ಕುಡಿಯುತ್ತಿರುವ ವೇಳೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಹಾಗಾಗಿ ಅದು ಎದೆಹಾಲು ಕುಡಿಯುತ್ತಲೇ ಮೂರ್ಛೆ ಹೋಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನವಾಗಲಿಲ್ಲ.

Infant Died, Infant Died During Choking Breast Milk, Infant Died During Choking Breast Milk In Idukki, Idukki news, ಮಗು ಸಾವು, ಹಾಲು ಕುಡಿಯುತ್ತಲೇ ಮಗು ಸಾವು, ತಾಯಿ ಹಾಲು ಕುಡಿಯುತ್ತಲೇ ಮಗು ಸಾವು, ಇಡುಕ್ಕಿಯಲ್ಲಿ ತಾಯಿ ಹಾಲು ಕುಡಿಯುತ್ತಲೇ ಮಗು ಸಾವು, ಇಡುಕ್ಕಿ ಸುದ್ದಿ,
ಹಾಲು ಕುಡಿಯುತ್ತಲೇ ತಾಯಿಯ ಮಡಿಲಲ್ಲಿ ಪ್ರಾಣ ಬಿಟ್ಟ ಕಂದ

By

Published : Jun 25, 2021, 8:25 AM IST

ಇಡುಕ್ಕಿ:ತಾಯಿ ಎದೆ ಹಾಲು ಕುಡಿಯುತ್ತಲೇ ಮಗುವೊಂದು ಪ್ರಾಣ ಬಿಟ್ಟಿರುವ ವಿಚಿತ್ರ ಘಟನೆ ಇಲ್ಲಿನ ನೆಡುಂಕಂಡಂ ಕರುಣಪುರಂನಲ್ಲಿ ನಡೆದಿದೆ. ಮಗು ಉಸಿರಾಟದಿಂದ ಬಳಲಿ ಸಾವನ್ನಪ್ಪಿದೆ ಎಂಬ ಮಾಹಿತಿ ದೊರೆತಿದೆ.

ಜಿಜಿನ್-ತಿನೋಲ್ ದಂಪತಿಯ ಎರಡೂವರೆ ತಿಂಗಳ ಗಂಡು ಮಗುವಿಗೆ ಹಾಲು ಕುಡಿಯುತ್ತಿರುವ ವೇಳೆ ಉಸಿರಾಟದ ಸಮಸ್ಯೆ ಎದುರಾಗಿದೆ. ಹಾಗಾಗಿ ಎದೆಹಾಲು ಕುಡಿಯುತ್ತಲೇ ಅದು ಮೂರ್ಛೆ ಹೋಗಿದೆ. ಇದರಿಂದ ಗಾಬರಿಗೊಂಡ ದಂಪತಿ ಚೆಟ್ಟುಕುಜಿಯ ಖಾಸಗಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿದೆ ಎಂದು ವೈದ್ಯರು ದೃಢಪಡಿಸಿದರು.

ಮಗುವಿನ ಸಾವಿಗೇನು ಕಾರಣ ಅನ್ನೋದು ನಿಖರವಾಗಿ ತಿಳಿದು ಬಂದಿಲ್ಲ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆಯ ಕುರಿತು ಕಂಪಮ್ಮೇಟ್ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details