ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಆಗೇ ಬಿಡುತ್ತಾ ಲಾಕ್​ಡೌನ್? ಪ್ರಧಾನಿ ಮಾತಿನತ್ತ ಕೋಟ್ಯಂತರ ಜನರ ಚಿತ್ತ​ ​ - Lockdown to Covid control

ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್​ ಮಾಡುವ ಅನಿವಾರ್ಯ ಪರಿಸ್ಥಿತಿ ಸರ್ಕಾರಕ್ಕೆ ಉಂಟಾಗಿದ್ದು, ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುವುದೀಗ ಪ್ರಶ್ನೆಯಾಗಿದೆ.

inevitability of locking down the Country for break the pandemic Chain
ಲಾಕ್​ ಡೌನ್​ ಮಾಡುವ ಅನಿವಾರ್ಯ

By

Published : May 5, 2021, 10:52 AM IST

ಹೈದರಾಬಾದ್: ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಬ್ಬರಿಸುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಲಾಕ್​ ಡೌನ್ ಜಾರಿಗೊಳಿಸುವುದು ಬಿಟ್ಟರೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಬೇರೆ ದಾರಿ ಕಾಣುತ್ತಿಲ್ಲ.

ಒಂದೆಡೆ ಆಕ್ಸಿಜನ್, ಬೆಡ್ ಸಮಸ್ಯೆಯಿಂದ ಪ್ರತಿನಿತ್ಯ ನೂರಾರು ರೋಗಿಗಳು​ ಕೊನೆಯುಸಿರೆಳೆಯುತ್ತಿದ್ದಾರೆ. ಮತ್ತೊಂದೆಡೆ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್​ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೂ, ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ಸರ್ಕಾರಕ್ಕೆ ಕಠಿಣ ಕ್ರಮ ಕೈಗೊಳ್ಳುವುದು ಬಿಟ್ಟರೆ ಬೇರೆ ದಾರಿಯಿಲ್ಲ ಇಲ್ಲದಂತಾಗಿದೆ.

ಪ್ರಧಾನಿ ಮೇಲೆ ಒತ್ತಡ:ಏನೇ ಕ್ರಮಗಳು ಕೈಗೊಂಡರೂ ಕೋವಿಡ್ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ಲಾಕ್​ ಡೌನ್​ ಜಾರಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಎಲ್ಲೆಡೆಯಿಂದ ಒತ್ತಡ ಹಾಕಲಾಗುತ್ತಿದೆ. ನಿನ್ನೆಯಷ್ಟೆ ಸುಪ್ರೀಂಕೋರ್ಟ್ ಲಾಕ್‌ಡೌನ್​ ಮಾಡುವ ಕುರಿತು ತೀರ್ಮಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದರ ಜೊತೆಗೆ ಕೇಂದ್ರ ಆರೋಗ್ಯ ಇಲಾಖೆಯೂ ಲಾಕ್‌ಡೌನ್ ಜಾರಿಗೆ ಶಿಫಾರಸು ಮಾಡಿದೆ. ಮತ್ತೊಂದೆಡೆ, ಅಮೆರಿಕದ ಸಾಂಕ್ರಾಮಿಕ ತಜ್ಞ ಡಾ.ಆಂಥೋನಿ ಫೌಸಿ ಕೂಡ ಒಂದಷ್ಟು ದಿನ ಲಾಕ್ ಡೌನ್​ ಮಾಡುವುದು ಒಳಿತು ಎಂದು ಭಾರತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇಕ್ಕಟಿಗೆ ಸಿಲುಕಿದ ಸರ್ಕಾರ:ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್​ ಬಿಟ್ಟರೆ ಬೇರೆ ಆಯ್ಕೆ ಸರ್ಕಾರದ ಮುಂದೆ ಇದ್ದಂತಿಲ್ಲ. ಆದರೆ, ಹಠಾತ್ ಲಾಕ್​ ಡೌನ್​ ಮಾಡಲು ಸರ್ಕಾರಕ್ಕೂ ಸಾಧ್ಯವಿಲ್ಲ. ಮುಖ್ಯವಾಗಿ ಕಳೆದ ವರ್ಷ ಮಾಡಿದ ಲಾಕ್​ ಡೌನ್​ನಿಂದ ಆರ್ಥಿಕತೆಯ ಮೇಲೆ ಬಿದ್ದ ಹೊಡೆತದಿಂದ ದೇಶ ಇನ್ನೂ ಮೇಲೆ ಎದ್ದಿಲ್ಲ. ಅನಿವಾರ್ಯ ಕಾರಣಕ್ಕೆ ಲಾಕ್​ ಡೌನ್ ಮಾಡಿದರೂ, ಕಳೆದ ವರ್ಷದಂತೆ ಮತ್ತೆ ವಲಸೆ ಕಾರ್ಮಿಕರ ಸಮಸ್ಯೆ ಉದ್ಬವಿಸಲಿದೆ. ಅವರಿಗೆ ವಿಶೇಷ ರೈಲುಗಳ ವ್ಯವಸ್ಥೆ ಮಾಡುವುದು, ಆಹಾರ ಒದಗಿಸುವುದು, ಎಲ್ಲವೂ ಸರ್ಕಾರಕ್ಕೆ ದೊಡ್ಡ ಸವಾಲಿನ ಕೆಲಸವಾಗಲಿದೆ. ಈ ಕಾರಣಕ್ಕೆ ಸರ್ಕಾರ ಲಾಕ್ ಡೌನ್ ಅಸ್ತ್ರ ಪ್ರಯೋಗಿಸಲು ಹಿಂಜರಿಯುತ್ತಿದೆ.

ಪ್ರಧಾನಿ ಮಾತಿನತ್ತ ಎಲ್ಲರ ಚಿತ್ತ:ಲಾಕ್ ಡೌನ್​ ಜಾರಿಯಾಗುತ್ತೋ, ಇಲ್ಲವೋ ಎಂಬುವುದರ ಬಗ್ಗೆ ಇಂದು ಅಂತಿಮ ನಿರ್ಧಾರವಾಗಲಿದೆ. ಇಂದು ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ಮೋದಿ ಮಾತಿನತ್ತ ಎಲ್ಲರ ಚಿತ್ತ ನೆಟ್ಟಿದೆ.

ABOUT THE AUTHOR

...view details