ನವದೆಹಲಿ:ಸದಾ ಒಂದಿಲ್ಲೊಂದು ವಿಭಿನ್ನವಾದ ವಿಡಿಯೋ, ಫೋಟೋ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಸಕ್ರಿಯವಾಗಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ವಿಶೇಷವಾದ ಟ್ವೀಟ್ ಮೂಲಕ ಜಗತ್ತಿನ ಶ್ರೀಮಂತ ಉದ್ಯಮಿ ಎಲೊನ್ ಮಸ್ಕ್ ಅವರ ಕಾಲೆಳೆದಿದ್ದಾರೆ.
ಟ್ವಿಟರ್ನಲ್ಲಿ 'ಇದೇ ನೋಡಿ ಭಾರತದ ಮೂಲ ಟೆಸ್ಲಾ ಕಾರು, ಇದಕ್ಕೆ ಇಂಧನ ಬೇಕಿಲ್ಲ, ಸ್ವಯಂಚಾಲಿತ ವ್ಯವಸ್ಥೆ ಬೇಕಿಲ್ಲ. ಯಾವುದೇ ಮಾಲಿನ್ಯ ಇಲ್ಲ. ಗೂಗಲ್ ಮ್ಯಾಪ್ ಕೂಡ ಬೇಕಿಲ್ಲ. ಸಂಪೂರ್ಣ ವಿಶ್ರಾಂತಿ ಹಾಗೂ ನೆಮ್ಮದಿ' ಎಂದು ಚಕ್ಕಡಿಯ ಫೋಟೋ ಶೇರ್ ಮಾಡಿದ್ದಾರೆ. ಇದರಲ್ಲಿ ಕೆಲ ರೈತರು ಚಕ್ಕಡಿಯಲ್ಲಿ ಮಲಗಿಕೊಂಡು ಹೋಗುತ್ತಿರುವ ದೃಶ್ಯವಿದೆ.
ಅಮೆರಿಕದ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಸದ್ಯ ಪ್ರಪಂಚದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಲಕ್ಷಾಂತರ ಕಾರು ಮಾರಾಟ ಮಾಡಿದೆ. ಅತ್ಯಾಧುನಿಕ ಕಾರುಗಳು ಎಂಬ ಹೆಸರು ಗಳಿಸಿರುವ ಚಾಲಕ ರಹಿತ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಟೆಸ್ಲಾ ಕಾರುಗಳಿಗೆ ಭಾರತದಲ್ಲೂ ಇವುಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆದರೆ, ಕೆಲವೊಂದು ನಿರ್ಬಂಧಗಳಿರುವ ಕಾರಣ ಇಲ್ಲಿಯವರೆಗೆ ದೇಶದೊಳಗೆ ಈ ಕಾರು ಲಗ್ಗೆ ಹಾಕಿಲ್ಲ.
ಇದನ್ನೂ ಓದಿ:ನಿಲ್ಲದ ಎಲೆಕ್ಟ್ರಿಕ್ ಸ್ಕೂಟರ್ಗಳ ಸ್ಫೋಟ ಪ್ರಕರಣ.. ತಮಿಳುನಾಡಿನಲ್ಲಿ ಹೊತ್ತಿ ಉರಿದ ಸ್ಕೂಟರ್!
ಆದರೆ, ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಈ ವಿಶೇಷವಾದ ಫೋಟೋ ಹಂಚಿಕೊಳ್ಳುವ ಮೂಲಕ ಎಲೊನ್ ಮಸ್ಕ್ ಅವರ ಕಾಲೆಳೆಯುವ ಕೆಲಸ ಮಾಡಿದ್ದಾರೆ. ಆನಂದ್ ಮಹೀಂದ್ರಾ ಅವರ ಟ್ವೀಟ್ಗೆ ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದಾರೆ.