ನವದೆಹಲಿ: ಚೆನಾಬ್ ನದಿಯಲ್ಲಿ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಇಸ್ಲಾಮಾಬಾದ್‌ನ ಕಳವಳ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲು ಭಾರತ ಹಾಗೂ ಪಾಕಿಸ್ತಾನದ ಇಂಡಸ್ ಆಯೋಗದ ಆಯುಕ್ತರ ಸಭೆ ಮಾರ್ಚ್ 23, 24 ರಂದು ನಡೆಯಲಿದೆ.
ಶಾಶ್ವತ ಇಂಡಸ್ ಆಯೋಗದ ವಾರ್ಷಿಕ ಸಭೆ ಇದಾಗಿದೆ. ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಪ್ರಕಾರ, ಉಭಯ ದೇಶಗಳ ಆಯುಕ್ತರು ಭಾರತ ಮತ್ತು ಪಾಕಿಸ್ತಾನದಲ್ಲಿ ವರ್ಷಕ್ಕೆ ಒಮ್ಮೆಯಾದರೂ ಪರ್ಯಾಯವಾಗಿ ಭೇಟಿಯಾಗಬೇಕಾಗುತ್ತದೆ. ಈ ವರ್ಷ ನವದೆಹಲಿಯಲ್ಲಿ ಮಾರ್ಚ್ 23 ಮತ್ತು 24ರಂದು ಸಭೆ ನಡೆಯಲಿದೆ ಎಂದು ಭಾರತದ ಇಂಡಸ್ ಆಯುಕ್ತ ಪಿ.ಕೆ.ಸಕ್ಸೇನಾ ತಿಳಿಸಿದರು.