ಇಂದೋರ್ (ಮಧ್ಯಪ್ರದೇಶ) : ಇಲ್ಲಿನ ಟ್ರಾಫಿಕ್ ಪೊಲೀಸ್ ಮ್ಯಾನ್ ರಂಜಿತ್ ಸಿಂಗ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಅವರು 7 ವರ್ಷದ ಬಾಲಕ ಗಾರ್ವಿತ್ ಶರ್ಮಾ ಅವರೊಂದಿಗೆ ಟ್ರಾಫಿಕ್ ಕೆಲಸ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ಟಿವಿಯಲ್ಲಿ ರಂಜಿತ್ ಸಿಂಗ್ ಟ್ರಾಫಿಕ್ ನಿಭಾಯಿಸುವುದನ್ನು ಮಗು ವೀಕ್ಷಿಸುತ್ತಿತ್ತು. ರಂಜಿತ್ ಸಿಂಗ್ ಅವರಿಂದ ಪ್ರಭಾವಿತವಾದ ಈ ಗಾರ್ವಿತ್ ಶರ್ಮಾ ಅವರನ್ನು ಭೇಟಿಯಾಗಲು ಹೈಕೋರ್ಟ್ ಕ್ರಾಸ್‌ರೋಡ್‌ಗೆ ತಲುಪಿದ್ದಾನೆ. ಅಲ್ಲಿ ಕೆಲಹೊತ್ತು ಸಂಚಾರ ನಿಯಂತ್ರಣದ ಕೆಲಸ ನಿರ್ವಹಿಸಿ ಗಮನ ಸೆಳೆದಿದ್ದಾನೆ.