ನವದೆಹಲಿ:ಸ್ಮಾರ್ಟ್ ಸಿಟೀಸ್ ಮಿಷನ್ (ಎಸ್‌ಸಿಎಂ), ಅಮೃತ್ ಯೋಜನೆ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳ ಆರನೇ ವಾರ್ಷಿಕೋತ್ಸವದ ಹಿನ್ನೆಲೆ ನಡೆಸಲಾಗಿದ್ದ ಆನ್‌ಲೈನ್ ಕಾರ್ಯಕ್ರಮವಾದ ಇಂಡಿಯಾ ಸ್ಮಾರ್ಟ್ ಸಿಟೀಸ್ ಕಾಂಪಿಟೇಷನ್ನಲ್ಲಿ (ಐಎಸ್‌ಎಸಿ) ಮಧ್ಯಪ್ರದೇಶದ ಇಂದೋರ್ ಮತ್ತು ಗುಜರಾತ್ನ ಸೂರತ್ ಜಿಲ್ಲೆಗಳಿಗೆ ನಗರಗಳ ವಿಭಾಗದಲ್ಲಿ ಪ್ರಶಸ್ತಿ ಒಲಿದುಬಂದಿದೆ.
ಸ್ಮಾರ್ಟ್ ಸಿಟೀಸ್ ಮಿಷನ್ (ಎಸ್‌ಸಿಎಂ), ಅಮೃತ್ ಮತ್ತು ಪ್ರಧಾನ್ ಮಂತ್ರಿ ಆವಾಸ್ ಯೋಜನೆಗಳನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 25, 2015 ರಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಆರು ಯೋಜನೆಗಳಿಗೆ ಆರು ವರ್ಷ ತುಂಬಿದ್ದು, ಇಂಡಿಯಾ ಸ್ಮಾರ್ಟ್ ಸಿಟೀಸ್ ಕಾಂಪಿಟೇಷನ್ ಅನ್ನು 2020ರಲ್ಲಿ ನಡೆಸಲಾಗಿತ್ತು.
ಸ್ಪರ್ಧೆಯ 2020ರ ಫಲಿತಾಂಶಗಳನ್ನು ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಇಂದೋರ್ ಮತ್ತು ಸೂರತ್ ನಗರ ವಿಭಾಗದಲ್ಲಿ ಜಂಟಿಯಾಗಿ ಪ್ರಶಸ್ತಿ ಪಡೆದರೆ, ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಪ್ರಶಸ್ತಿ ಗೆದ್ದುಕೊಂಡಿದೆ.