ಇಂದೋರ್(ಮಧ್ಯ ಪ್ರದೇಶ): ಬಾಂಬ್ ಬೆದರಿಕೆಯ ಕರೆ ಬಂದ ಬಳಿಕ ಇಲ್ಲಿನ ಭದ್ರತಾ ಪಡೆ ಟೈಟ್ ಸೆಕ್ಯುರಿಟಿ ಕೈಗೊಂಡಿದೆ. ಆದರೆ ಈ ಮಧ್ಯೆ ಇಂದೋರ್ ಪೊಲೀಸರ ಅಧಿಕೃತ ವೆಬ್‌ಸೈಟ್ ಅನ್ನು ಮಂಗಳವಾರ ಹ್ಯಾಕ್ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆಕ್ಷೇಪಾರ್ಹ ಸಂದೇಶಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
"ಅಪರಿಚಿತ ವ್ಯಕ್ತಿಯೊಬ್ಬ ಇಂದೋರ್ ಪೊಲೀಸ್ ವೆಬ್ಸೈಟ್ನ್ನು ಹ್ಯಾಕ್ ಮಾಡಿದ್ದಾನೆ. ಅದನ್ನು ತಕ್ಷಣವೇ ನಿರ್ಬಂಧಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ" ಎಂದು ಇಂದೋರ್‌ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿಪಿ) ಹರಿನಾರಾಯಂಚಾರಿ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.