ಇಂದೋರ್(ಮಧ್ಯಪ್ರದೇಶ):ಸದಾ ಒಂದಿಲ್ಲೊಂದು ಮಾನವೀಯ ಕಾರ್ಯಗಳಿಂದಾಗಿ ಎಲ್ಲ ಕಡೆಯಿಂದ ಮೆಚ್ಚುಗೆಗೆ ಪಾತ್ರರಾಗುವ ಪೊಲೀಸರು, ಸದ್ಯ ಮತ್ತೊಂದು ಎಲ್ಲರ ಪ್ರೀತಿಗೆ ಪಾತ್ರರಾಗುವ ಕೆಲಸ ಮಾಡಿದ್ದಾರೆ.
ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್ನಲ್ಲಿ. ಅಪಾರ್ಟ್ಮೆಂಟ್ವೊಂದರ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ವೃದ್ಧೆಯೋರ್ವಳ ಪ್ರಾಣ ಉಳಿಸಿದ್ದಾರೆ. ಫ್ಲಾಟ್ನಲ್ಲಿ ಏಕಾಂಗಿಯಾಗಿ ವಾಸವಾಗಿರುವ ವೃದ್ಧೆಯ ಪತಿ ಮತ್ತು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ. ಸದ್ಯ ಲಾಕ್ಡೌನ್ ಆಗಿರುವ ಕಾರಣ ವೃದ್ಧೆ ಆಸ್ಟ್ರೇಲಿಯಾಗೆ ತೆರಳಲು ಸಾಧ್ಯವಾಗದೇ ಇಲ್ಲೇ ಉಳಿದುಕೊಂಡಿದ್ದರು.
ಹಲವು ದಿನಗಳಿಂದ ಏಕಾಂಗಿಯಾಗಿ ವಾಸ ಮಾಡ್ತಿದ್ದರು. ಕೆಲ ದಿನಗಳಿಂದ ವೃದ್ಧೆ ವಾಸವಾಗಿದ್ದ ಮನೆಯ ಗೇಟ್ ಓಪನ್ ಆಗಿರಲಿಲ್ಲ. ಹೀಗಾಗಿ ನೆರೆಹೊರೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಲಾಸಿಯಾ ಪೊಲೀಸರು ಸ್ಥಳಕ್ಕಾಗಮಿಸಿ ಮನೆ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಈ ವೇಳೆ ವೃದ್ಧೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ.