ಇಂದೋರ್, ಮಧ್ಯಪ್ರದೇಶ:ಅದು ಹೇಳ್ಕೊಳ್ಳೋಕೆ ದೇಶದ ಅತ್ಯಂತ ಸ್ವಚ್ಛ ನಗರ. ಅಲ್ಲಿ ಸ್ವಚ್ಛತೆ ಕಂಡು ಯಾರಾದರೂ ಒಮ್ಮೆ ಆ ನಗರವನ್ನೊಮ್ಮೆ ನೋಡ್ಬೇಕು ಅಂತ ಕನಸು ಕಂಡಿರುತ್ತಾರೆ. ಸ್ವಚ್ಛ ನಗರದ ಗರಿಮೆ ಬಂದಾಗ ಅಲ್ಲಿನ ಮುನ್ಸಿಪಲ್ ಕಚೇರಿ ಸಂಭ್ರಮಿಸಿದ್ದುಂಟು. ಪೌರ ಕಾರ್ಮಿಕರು ಸಿಹಿ ಹಂಚಿ ಕುಣಿದಾಡಿದ್ದುಂಟು. ಆದರೆ ಅಲ್ಲಿನ 'ಸ್ವಚ್ಛತೆ'ಯ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಹೌಹಾರುತ್ತೀರಿ..!
ಹೌದು, ಅಲ್ಲಿ ಸ್ವಚ್ಛತೆ ಅಂದ್ರೆ ನಗರದ ರಸ್ತೆಗಳಿಂದ ಕಸ ತೆಗೆಯೋದಲ್ಲ. ಮನುಷ್ಯರನ್ನೇ ತೆಗೆದು ನಗರದ ಹೊರಗೆ ಬಿಡ್ತಾರೆ. ಕಸವನ್ನಾದರೂ ಸಂಸ್ಕರಿಸಿ, ಮತ್ತೇನಾದ್ರೂ ಮಾಡಬಹುದೇನೋ..? ಆದರೆ ಈ ನಗರದ ವೃದ್ಧರನ್ನು ಕಸಕ್ಕಿಂತ ಕೀಳಾಗಿ ನೋಡ್ತಾರೆ.
ಅದು ಶುಕ್ರವಾರ ಮಧ್ಯಾಹ್ನ ಸುಮಾರು 2.30ರ ಸಮಯ. ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ನ 'ಸಿಬ್ಬಂದಿ ಸ್ವಚ್ಛತಾ ಕಾರ್ಯ' ಮಾಡಲು ಮುಂದಾಗಿದ್ದಾರೆ. ಸ್ವಚ್ಛತಾ ಕಾರ್ಯ ಏನ್ ಗೊತ್ತಾ..? ನಗರದ ಅನಾಥ, ನಿರಾಶ್ರಿತ ವೃದ್ಧರನ್ನು ಕರೆತಂದು ನಗರದ ಹೊರವಲಯಕ್ಕೆ ಬಿಟ್ಟು ಹೋಗೋದು..!
ಇದು ಕಹಿ ಸತ್ಯ..!, ಇಬ್ಬರು ವೃದ್ಧೆಯರು ಸೇರಿದಂತೆ 10 ಮಂದಿ ನಿರಾಶ್ರಿತರನ್ನು ಟ್ರಕ್ನಲ್ಲಿ ಕರೆತಂದ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ನ ಸಿಬ್ಬಂದಿ ರಸ್ತೆ ಬದಿ ಇಳಿಸಿ ತೆರಳಲು ಮುಂದಾಗಿದ್ದಾರೆ. ಈ ವೇಳೆ ಅಲ್ಲಿಂದ ಅನತಿ ದೂರದಲ್ಲಿದ್ದ ಟೀ ಅಂಗಡಿಯ ಮಾಲೀಕ ಈ ಬಗ್ಗೆ ವಿಚಾರಿಸಿದಾಗ 'ಇವರು ನಗರವನ್ನು ಗಲೀಜು ಮಾಡ್ತಾರೆ. ಅವರನ್ನು ನಗರದಿಂದ ಹೊರಗೆ ಬಿಡೋದು ಸರ್ಕಾರದ ಆದೇಶ' ಅಂತ ಹೇಳಿದ್ದಾರೆ.
ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದಾಗ ಅವರು ಮತ್ತೆ ವೃದ್ಧರನ್ನು ಟ್ರಕ್ನೊಳಗೆ ತುಂಬಿಕೊಂಡು ಹೊರಟಿದ್ದಾರೆ. ಇದು ಸ್ಥಳೀಯರೊಬ್ಬರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಕಿಗೆ ಬಂದಿದ್ದು ಹೇಗೆ..?