ಕರ್ನಾಟಕ

karnataka

ETV Bharat / bharat

ಹಿಂಗೋಟೆ ಸಮರೋತ್ಸವ.. ಈ ಸಾಂಪ್ರದಾಯಿಕ ಆಟಕ್ಕಿದೆ 200 ವರ್ಷದ ಇತಿಹಾಸ - 200 ವರ್ಷದ ಸಂಪ್ರದಾಯ

ಉತ್ತರ ಭಾರತದಲ್ಲಿ ಹಿಂಗೋಟೆ ಸಮರ ಉತ್ಸವ ಎಂಬ ಸಂಪ್ರದಾಯ ಭಾರಿ ಮನ್ನಣೆ ಪಡೆಯುತ್ತಿದೆ. ದೀಪಾವಳಿಯ ಹಬ್ಬದ ಪ್ರಯುಕ್ತ ಈ ಬಾರಿಯೂ ಸಹೋದರತ್ವ ಸಾರುವ ಹಿಂಗೋಟೆ ಸಮರ ಉತ್ಸವ ಮಧ್ಯೆಪ್ರದೇಶದ ಇಂದೋರ್ ಜಿಲ್ಲೆಯ ಗೌತಮಪುರದಲ್ಲಿ ಬುಧವಾರ ಸಂಭ್ರಮದಿಂದ ನೆರವೇರಿತು. ಈ ವೇಳೆ 46 ಜನರಿಗೆ ಸಣ್ಣಪುಟ್ಟ ಗಾಯಗಳಾದವು. ಈ ಉತ್ಸವಕ್ಕೆ ಪ್ರೇಕ್ಷಕರು ಮನಸೋತರು.

_hingot_youddh
ಹಿಂಗೋಟೆ ಸಮರೋತ್ಸವ

By

Published : Oct 27, 2022, 3:35 PM IST

Updated : Oct 27, 2022, 3:54 PM IST

ಗೌತಮಪುರ(ಮಧ್ಯಪ್ರದೇಶ): ಉತ್ತರ ಭಾರತದಲ್ಲಿ ಹಿಂಗೋಟೆ ಸಮರ ಉತ್ಸವ ಎಂಬ ಸಂಪ್ರದಾಯ ಭಾರಿ ಮನ್ನಣೆ ಪಡೆಯುತ್ತಿದೆ. ದೀಪಾವಳಿಯ ಹಬ್ಬದ ಪ್ರಯುಕ್ತ ಈ ಬಾರಿಯೂ ಸಹೋದರತ್ವದ ಪ್ರೀತಿಯ ಸಾರುವ ಹಿಂಗೋಟೆ ಸಮರೋತ್ಸವ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಗೌತಮಪುರದಲ್ಲಿ ಬುಧವಾರ ಸಂಭ್ರಮದಿಂದ ನೆರವೇರಿತು.

ಬುಧವಾರ ಸಂಜೆ ದೇವನಾರಾಯಣ ದೇವಸ್ಥಾನದ ಎದುರಿನ ಮೈದಾನದಲ್ಲಿ ತುರ್ರಾ (ಗೌತಮಪುರ) ಕಲ್ಗಿ (ರುಂಜಿ) ನಡುವೆ ಈ ನಕಲಿ ಸಮರ ಜರುಗಿತು. ಎರಡು ಬಣದವರು ಸೂರ್ಯಾಸ್ತದ ಸಮಯ ಪರಸ್ಪರ ಸುಡುವ ಹಿಂಗೋಟೆ (ಬೆಂಕಿ ಬಾಣಗಳು) ಎಸೆದರು. ಈ ವೇಳೆ 46 ಜನರಿಗೆ ಸಣ್ಣಪುಟ್ಟ ಗಾಯಗಳಾದವು. ವೀಕ್ಷಿಸಲು ಅಲ್ಲಿ ಸೇರಿದ್ದ ಸಾವಿರಾರು ಪ್ರೇಕ್ಷಕರು, ಎರಡೂ ಬಣದವರನ್ನು ಹುರುದುಂಬಿಸುವ ಮೂಲಕ ಜೈಕಾರ ಕೂಗಿದರು.

ಪ್ರೇಕ್ಷಕರು ಪುಳಕಿತ : ಹಿಂಗೋಟೆ ರಣರಂಗದ ವೀಕ್ಷಣೆಯಲ್ಲಿ ಪ್ರೇಕ್ಷಕರು ಮಗ್ನರಾಗಿದ್ದರು. ಸಂಜೆ 4 ಗಂಟೆಯ ಬಳಿಕ ಡೊಳ್ಳು ಕುಣಿತ, ಡೊಳ್ಳು ಕುಣಿತದೊಂದಿಗೆ ಹಿಂಗೋಟೆ ಕಾಳಗಕ್ಕೆ ಮನೆಯಿಂದ ಹೊರಟ ಕಾಲ್ಗಿ ಹಾಗೂ ತುರ್ರಾ ತಂಡದ ಯೋಧರು ದೇವನಾರಾಯಣ ದೇವಸ್ಥಾನದ ಮೈದಾನದಲ್ಲಿ ತಮ್ಮ ತಮ್ಮ ತಂಡಗಳೊಂದಿಗೆ ಮುಖಾಮುಖಿಯಾಗಿ ನಿಂತರು. ಸಹೋದರರು ಶಿರಸ್ತ್ರಾಣ, ಕೈಯಲ್ಲಿ ಗುರಾಣಿ, ಭುಜದ ಮೇಲೆ ಜೋಲಾ (ತರ್ಕ) ಧರಿಸಿ, ಯೋಧರು ಮೈದಾನ ಪ್ರವೇಶಿಸುತ್ತಿದ್ದಂತೆಯೇ ಪ್ರೇಕ್ಷಕರು ರೋಮಾಂಚನಗೊಂಡರು. ಇಡೀ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ಮೂಲಕ ಹುರಿದುಂಬಿಸಿದರು. ಸಂಜೆ 5 ಗಂಟೆಗೆ ತುರ್ರ ಮತ್ತು ಕಲ್ಗಿ ದಳದ ಮುಖ್ಯಸ್ಥರು ಅಪ್ಪಿಕೊಂಡು ಹಿಂಗೋಟೆಯನ್ನು ಆಕಾಶದೆತ್ತರಕ್ಕೆ ಒಟ್ಟಿಗೆ ಬಿಟ್ಟರು. ಎರಡೂ ಬಣದವರು ಹಿಂಗೋಟೆಯನ್ನು ಮುಖಾಮುಖಿಯಾಗಿ ಎಸೆಯಲು ಪ್ರಾರಂಭಿಸಿದವು.

ಹಿಂಗೋಟೆ ಸಮರೋತ್ಸವ ನಡೆಯುತ್ತಿರುವ ಸ್ಥಳ

ಸುರಕ್ಷತೆಗೆ ಆದ್ಯತೆ:ಸಮಯ ಕಳೆದಂತೆ, ಈ ಸಮರ ಆಟದ ರೋಚಕತೆ ಉತ್ತುಂಗಕ್ಕೇರಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಹಿಂಗೋಟೆ ಯುದ್ಧದಲ್ಲಿ 46 ಮಂದಿ ಸಣ್ಣಪುಟ್ಟ ಗಾಯಗೊಂಡರು. ಕೊನೆಗೆ 7 ಗಂಟೆಯ ಹೊತ್ತಿಗೆ ಯಾವುದೇ ಪಕ್ಷ ಸೋಲು-ಗೆಲುವು ಇಲ್ಲದೆ ಯುದ್ಧವು ಕೊನೆಗೊಂಡಿತು. ವೇಷಧಾರಿಗಳು ಮತ್ತು ಪ್ರೇಕ್ಷಕರು ಮನೆಯತ್ತ ತೆರಳಿದರು. ಈ ಬಾರಿ ವೀಕ್ಷಕರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ ಪರಿಷತ್ತು ಹಾಗೂ ಆಡಳಿತ ಮಂಡಳಿ ನೆಟ್‌ಗಳ ಎತ್ತರವನ್ನು 12 ಅಡಿಗಳಿಗೆ ಇರಿಸಿತ್ತು. ಆದರೂ ಈ ಸಂದರ್ಭದಲ್ಲಿ ಒಟ್ಟು 46 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.

ಹಿಂಗೋಟೆ ಹೇಗೆ ಗೊತ್ತಾ..!: ಹಿಂಗೋಟೆ ಸಮರ ಕಲೆ ಪ್ರಾಚೀನ ಸಂಪ್ರದಾಯವಾಗಿದೆ. ಹಿಂಗೋಟೆ ಅನ್ನುವುದು ಒಂದು ಹಣ್ಣು. ಜನರು ಮುಳ್ಳಿನ ಪೊದೆಗಳಲ್ಲಿ ಸುಮಾರು ಒಂದು ತಿಂಗಳು ಮುಂಚಿತ ಹಿಂಗೋಟ್ ಸಂಗ್ರಹಿಸುತ್ತಾರೆ. ಅದರೊಳಗಿನ ತಿರುಳನ್ನು ಬೇರ್ಪಡಿಸಿ, ಅದರ ಗಟ್ಟಿಯಾದ ಹೊರ ಕವಚವನ್ನು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಅದರಲ್ಲಿ ಗನ್ಪೌಡರ್ ಮತ್ತು ಉಂಡೆಗಳಿಂದ ತುಂಬಿಸಲಾಗುತ್ತದೆ. ಗನ್‌ಪೌಡರ್ ತುಂಬಿದ ಬಳಿಕ ಹಿಂಗೋಟ್ ಬಾಂಬ್‌ನ ರೂಪ ಪಡೆಯುತ್ತದೆ. ಅದರ ಒಂದು ತುದಿಗೆ ಮಕ್ಕು ಲೇಪಿತ ದಾರ ಇರುತ್ತದೆ. ಒಂದು ಭಾಗಕ್ಕೆ ಬೆಂಕಿ ಹಚ್ಚಿದಾಗ, ಹಿಂಗೋಟ್ ರಾಕೆಟ್‌ನಂತೆ ತಿರುಗುತ್ತದೆ ಮತ್ತು ಇನ್ನೊಂದು ಬಣದ ಕಡೆಗೆ ಚಲಿಸುತ್ತದೆ. ಹಿಂಗೋಟೆ ಸಮರದ ದಿನ, ಕಾಲ್ಗಿ ಹಾಗೂ ತುರ್ರಾ ತಂಡದ ಯೋಧರು ಶಿರಸ್ತ್ರಾಣಗಳನ್ನು ಧರಿಸುತ್ತಾರೆ, ಹೆಗಲ ಮೇಲೆ ಹಿಂಗೋಟೆ ತುಂಬಿದ ಚೀಲಗಳನ್ನು ಧರಿಸುತ್ತಾರೆ, ಕೈಯಲ್ಲಿ ಗುರಾಣಿಗಳು ಮತ್ತು ಮರವನ್ನು ಸುಡುತ್ತಾರೆ, ಮಧ್ಯಾಹ್ನ ಎರಡು ಗಂಟೆಯ ನಂತರ. ನಡೆದ ಈ ಕಾಳಗದಲ್ಲಿ ಮುಂಭಾಗದ ಯೋಧ ಎಸೆದ ಹಿಂಗೋಟೆನಿಂದ ಗಾಯಗೊಂಡ ಯೋಧನ ಜೋಳಿಗೆ ಸುಟ್ಟು ಕರಕಲಾಗಿದೆ. ಹಲವು ಯೋಧರೂ ಗಾಯಗೊಂಡಿದ್ದಾರೆ.

ಹಿಂಗೋಟೆ ಯುದ್ಧ ಇತಿಹಾಸ : ಹಿಂಗೋಟೆ ಯುದ್ಧ ಹೇಗೆ, ಏಕೆ ಮತ್ತು ಯಾವಾಗ ಪ್ರಾರಂಭವಾಯಿತು ಕುರಿತು ಯಾವುದೇ ಉಲ್ಲೇಖವಿಲ್ಲ. 200 ವರ್ಷಗಳ ಹಳೆಯ ಸಂಪ್ರದಾಯ ಬಹಳ ವರ್ಷಗಳ ಹಿಂದೆ ಗೌತಮಪುರ ಪ್ರದೇಶದ ಗಡಿಗಳನ್ನು ರಕ್ಷಿಸಲು ನಿಯೋಜಿಸಿದ ಸೈನಿಕರು ಹಿಂಗೋಟೆಯೊಂದಿಗೆ ಇತರ ಆಕ್ರಮಣಕಾರರ ಮೇಲೆ ದಾಳಿ ನಡೆಸುತ್ತಿದ್ದರು. ಹಿಂಗೋಟ್ ಯುದ್ಧವು ಒಂದು ರೀತಿಯ ಸಮರಾಭ್ಯಾಸ ರೀತಿ ಪ್ರಾರಂಭವಾಯಿತು. ನಂತರ ಧಾರ್ಮಿಕ ಆಚರಣೆಗಳು ಅದರೊಂದಿಗೆ ಬೆರೆತವು.

ನೋಡಿ.. ನಾಲ್ಕು ಲಕ್ಷ ಬಳೆಗಳಿಂದ ಕನಕದುರ್ಗಮ್ಮ ದೇವಿಗೆ ಅಲಂಕಾರ- ವಿಡಿಯೋ

Last Updated : Oct 27, 2022, 3:54 PM IST

ABOUT THE AUTHOR

...view details