ಪಾಟ್ನಾ(ಬಿಹಾರ):ನೇಪಾಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತ ನೇಪಾಳ ಅಂತಾರಾಷ್ಟ್ರೀಯ ಗಡಿಯನ್ನು ನವೆಂಬರ್ 17 ರ ಮಧ್ಯರಾತ್ರಿಯಿಂದ 72 ಗಂಟೆಗಳ ಕಾಲ ಮುಚ್ಚಲು ನಿರ್ಧರಿಸಲಾಗಿದೆ. ನೇಪಾಳದಲ್ಲಿ ನವೆಂಬರ್ 20 ರಂದು ಮತದಾನ ನಡೆಯಲಿದ್ದು, ಶಾಂತಿಯುತ ಚುನಾವಣೆಗಾಗಿ ಉಭಯ ದೇಶಗಳ ನಡುವೆ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.
ಈ ಬಗ್ಗೆ ಭಾರತದ ಗೃಹ ಇಲಾಖೆಗೆ ಪತ್ರ ಬರೆದಿರುವ ನೇಪಾಳ ಸರ್ಕಾರ ಮತದಾನದ ಬಳಿಕ ಅಂದರೆ, ನವೆಂಬರ್ 20 ರಂದು ರಾತ್ರಿ 8 ಗಂಟೆಗೆ ಗಡಿ ತೆರೆಯಲಾಗುವುದು. ವಿಮಾನಗಳ ಮೂಲಕ ನೇಪಾಳಕ್ಕೆ ಬರುವ ಎಲ್ಲ ದೇಶಗಳ ಪ್ರಯಾಣಿಕರು ಪಾಸ್‌ಪೋರ್ಟ್ ಮತ್ತು ಟಿಕೆಟ್ ಅನ್ನು ಕಡ್ಡಾಯವಾಗಿ ಒಪ್ಪಿಸಬೇಕು. ಆಂಬ್ಯುಲೆನ್ಸ್, ನೀರು, ಹಾಲಿನ ಟ್ಯಾಂಕರ್, ಅಗ್ನಿಶಾಮಕ ವಾಹನ ಸೇರಿದಂತೆ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.