ಗುವಾಹಟಿ(ಅಸ್ಸಾಂ):ಗುವಾಹಟಿ-ಕೋಲ್ಕತ್ತಾ ನಡುವೆ ಸಂಚರಿಸಬೇಕಿದ್ದ ಇಂಡಿಗೋ ವಿಮಾನ 6F757 ರನ್‌ವೇಯಿಂದ ಸ್ಕಿಡ್ ಆಗಿದೆ. ವಿಮಾನದ 2 ಚಕ್ರಗಳು ಇದ್ದಕ್ಕಿದ್ದಂತೆ ಸ್ಕಿಡ್ ಆಗಿ ರನ್‌ವೇಯ ಮಣ್ಣಿನಲ್ಲಿ ಸಿಲುಕಿಕೊಂಡವು. ನಿನ್ನೆ(ಗುರುವಾರ) ಮಧ್ಯಾಹ್ನ 2.20ರ ವೇಳೆಗೆ ಘಟನೆ ನಡೆದಿದೆ. ನಂತರ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.
ರನ್‌ವೇಯಿಂದ ಸ್ಕಿಡ್ ಆದ ಜೋರ್ಹತ್-ಕೋಲ್ಕತ್ತಾ ಇಂಡಿಗೋ ವಿಮಾನ ಹಾರಾಟ ರದ್ದು - ಜೋರ್ಹತ್ ಕೋಲ್ಕತ್ತಾ ಇಂಡಿಗೋ ವಿಮಾನ ಹಾರಾಟ ರದ್ದು
ಇಂಡಿಗೋ ವಿಮಾನವೊಂದು ಅಸ್ಸಾಂನ ಜೋರ್ಹತ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುವ ವೇಳೆ ರನ್‌ವೇಯಿಂದ ಸ್ಕಿಡ್ ಆಗಿದೆ. ವಿಮಾನದ ಚಕ್ರಗಳು ಮಣ್ಣಿನಡಿ ಸಿಲುಕಿದ್ದು ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.
ಮಣ್ಣಿನಡಿ ಸಿಲುಕಿದ ವಿಮಾನದ ಚಕ್ರಗಳು
ವಿಮಾನದಲ್ಲಿ 98 ಮಂದಿ ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಮತ್ತು ಘಟನೆಯ ತನಿಖೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ಟ್ವೀಟ್ ಮಾಡಿದೆ. ಜೋರ್ಹತ್-ಕೋಲ್ಕತ್ತಾ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಇಂಡಿಗೋ ವಿಮಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದು, ರಾತ್ರಿ 8:15ರ ಸುಮಾರಿಗೆ ಹಾರಾಟ ರದ್ದುಗೊಳಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.