ಪಾಟ್ನಾ (ಬಿಹಾರ): ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. 181 ಜನರು ಪ್ರಯಾಣಿಸುತ್ತಿದ್ದ 6E 2433 ಸಂಖ್ಯೆಯ ವಿಮಾನ ಇದಾಗಿದ್ದು, ಇದರ ಒಂದು ಎಂಜಿನ್ ನಿಷ್ಕ್ರೀಯಗೊಂಡ ಕಾರಣದಿಂದ ತುರ್ತು ಲ್ಯಾಂಡಿಂಗ್ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ಘಟನೆಯ ವಿವರ:ಬೆಳಗ್ಗೆ 9 ಗಂಟೆ 8 ನಿಮಿಷಕ್ಕೆ ಇಂಡಿಗೋ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಟೆಕ್ಆಫ್ ಆದ 3 ನಿಮಷಕ್ಕೆ ಅಂದರೆ 9 ಗಂಟೆ11 ನಿಮಿಷಕ್ಕೆ ವಿಮಾನದ ಎಂಜಿನ್ ನಿಷ್ಕ್ರೀಯಗೊಂಡಿದೆ. ಕೂಡಲೇ ಇನದನ್ನು ಗಮನಿಸಿದ ಪೈಲಟ್ ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನ ಟೇಕ್ಆಫ್ ಆದ ವೇಳೆ, ಪ್ರಯಾಣಿಕರ ಹೊರತು ಪಡಿಸಿ 8 ಜನ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ ಪ್ರಯಾಣಿಕರನ್ನು ಹೊತ್ತು ವಿಮಾನ ದೆಹಲಿಯತ್ತ ಹಾರಿತ್ತು. ಟೆಕ್ಆಪ್ ಆದ ಕೆಲವೇ ಸೆಕೆಂಡ್ಗಳಲ್ಲಿ ವಿಮಾನದೊಳಗೆ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನದ ಎರಡು ಎಂಜಿನ್ಗಳ ಪೈಕಿ ಒಂದು ನಿಷ್ಕ್ರಿಯಗೊಂಡಿದ್ದು, ಪೈಲಟ್ ಪತ್ತೆ ಹಚ್ಚಿದ್ದಾರೆ. ಕೂಡಲೇ ನಿಲ್ದಾಣದ ಕಂಟ್ರೋಲ್ ರೂಮ್ಗೆ ಕರೆ ಮಾಡಿ ತುರ್ತು ಭೂಸ್ಪರ್ಶಕ್ಕೆ ಕೋರಿದ್ದಾರೆ. ಕೂಡಲೆ ತಾಂತ್ರಿಕ ದೋಷ ಕಂಡ ಇಂಡಿಗೋ ವಿಮಾನ ಲ್ಯಾಂಡಿಂಗ್ಗೆ ಅನುವು ಮಾಡಿಕೊಟ್ಟಿದೆ.