ನವದೆಹಲಿ:ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೊರಡಲು ಸಿದ್ಧವಾಗಿದ್ದ ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪ್ರತಿಕ್ರಿಯೆ ನೀಡಿದ್ದು, ಬೈ ಮಿಸ್ಟೇಕ್( ಅರಿವಿಗೆ ಬಾರದೇ) ಆಗಿ ಅವರು ವಿಮಾನದ ಬಾಗಿಲು ತೆರೆದಿದ್ದಾರೆ ಅಷ್ಟೇ, ಅದಕ್ಕಾಗಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಂಡಿಗೊ ವಿಮಾನದ ತುರ್ತು ನಿರ್ಗಮನ ದ್ವಾರವನನ್ನು ಪ್ರಯಾಣಿಕರೊಬ್ಬರು ಡಿ. 10 ರಂದು ತೆರೆಗೆದಿದ್ದರು ಎಂಬುದಾಗಿ ವರದಿಯಾಗಿತ್ತು. ಹೀಗೆ ಬಾಗಿಲು ತೆರೆದಿದ್ದು ಸಂಸದ ತೇಜಸ್ವಿ ಸೂರ್ಯ ಎಂದೂ ಹೇಳಲಾಗುತ್ತಿದೆ. ಈ ಸಂಬಂಧ ಬಂದ ವರದಿಗಳನ್ನು ಆಧರಿಸಿ ನಿನ್ನೆ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಈ ಎಲ್ಲ ಟೀಕೆಗಳಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈಗ ಈ ಹೇಳಿಕೆ ನೀಡಿದ್ದಾರೆ.
ವಾಸ್ತವ ನೋಡುವುದು ಮುಖ್ಯ:'ಟೀಕೆ ಮಾಡುವ ಮುನ್ನ ಸತ್ಯಗಳನ್ನು ಹಾಗೂ ವಾಸ್ತವಾಂಶಗಳನ್ನು ತಿಳಿಯುವುದು ಮುಖ್ಯ. ವಿಮಾನವು ಟೇಕ್ ಆಫ್ ಆಗುವ ಮುನ್ನ ಪ್ರಯಾಣಿಕ ಆಕಸ್ಮಿಕವಾಗಿ ಬಾಗಿಲು ತೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಡಿಗೂ ಏರ್ಲೈನ್ಸ್ ಸಿಬ್ಬಂದಿ ಎಲ್ಲ ತಪಾಸಣೆಯ ನಂತರ ವಿಮಾನ ಹಾರಾಟ ಮಾಡಿದ್ದಾರೆ ಅವರು ತಮ್ಮ ತಪ್ಪಿಗೆ ಕ್ಷಮೆಯನ್ನೂ ಕೇಳಿದ್ದಾರೆ' ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಏನಿದು ಪ್ರಕರಣ?:ಡಿಸೆಂಬರ್ 10 ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ 6E 7339 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಆಕಸ್ಮಿಕವಾಗಿ ತುರ್ತು ನಿರ್ಗಮನವನ್ನು ತೆರೆದಿದ್ದರು. ಈ ಸಂಬಂಧ ಅವರು ಪ್ರಯಾಣಿಕ ಕ್ಷಮೆಯಾಚಿಸಿದ್ದರು ಎಂದು ವರದಿಯಾಗಿತ್ತು.