ಕರ್ನಾಟಕ

karnataka

ETV Bharat / bharat

2021ರಲ್ಲಿ ಭಾರತದ ಟಿವಿ ಮಾರುಕಟ್ಟೆ ದಾಖಲೆಯ ಏರಿಕೆ.. ಸ್ಮಾರ್ಟ್ ಟಿವಿಗಳದ್ದೇ ಮೇಲುಗೈ - Smart TV market in India

ಇತ್ತೀಚಿನ ಸಂಶೋಧನೆಯ ಪ್ರಕಾರ ಟಿವಿ ಮಾರುಕಟ್ಟೆಯಲ್ಲಿ ಒಟ್ಟಾರೆ ಸ್ಮಾರ್ಟ್ ಟಿವಿ ಪಾಲು 2020 ರಲ್ಲಿ 67 ಪ್ರತಿಶತ ಇತ್ತು. 2021 ರಲ್ಲಿ ಈ ಪ್ರಮಾಣ ಶೇ. 84ಕ್ಕೆ ಏರಿಕೆಯಾಗಿದೆ.

Smart TV
Smart TV

By

Published : Mar 4, 2022, 9:44 AM IST

ನವದೆಹಲಿ: ಕೋವಿಡ್​ ಸಾಂಕ್ರಾಮಿಕದ ನಡುವೆ ಕೂಡ 2021ರಲ್ಲಿ ಭಾರತದ ಟಿವಿ ಮಾರುಕಟ್ಟೆ ದಾಖಲೆಯ ಏರಿಕೆ ಕಂಡಿದೆ. ಎರಡನೇ ಅಲೆ ಬಳಿಕ ಆರ್ಥಿಕ ಚೇತರಿಕೆ ಮತ್ತು ಸಾಲು ಸಾಲು ಹಬ್ಬಗಳು ಬಂದ ಕಾರಣ ಟಿವಿ ಕೊಳ್ಳುವವರ ಸಂಖ್ಯೆಯೂ ಹೆಚ್ಚಿತು.

ಹೀಗಾಗಿ 2021ರಲ್ಲಿ ಟಿವಿ ಮಾರುಕಟ್ಟೆಯು ಶೇ.21ರಷ್ಟು ಹೆಚ್ಚಳ ಕಂಡಿದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಸ್ಮಾರ್ಟ್ ಟಿವಿ ಮಾರುಕಟ್ಟೆಯು 2021 ರಲ್ಲಿ ಶೇಕಡಾ 55 ರಷ್ಟು ಬೆಳವಣಿಗೆ ಕಂಡಿದೆ ಹಾಗೂ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇ.67ರಷ್ಟು ಏರಿಕೆ ಕಂಡಿದೆ. ಕೌಂಟರ್‌ಪಾಯಿಂಟ್ ರಿಸರ್ಚ್‌ನ ಐಒಟಿ (ಇಂಟರ್​ನೆಟ್​ ಆಫ್​ ಥಿಂಗ್ಸ್) ಸೇವೆಯ ಇತ್ತೀಚಿನ ಸಂಶೋಧನೆಯ ಪ್ರಕಾರ ಟಿವಿ ಮಾರುಕಟ್ಟೆಯಲ್ಲಿ ಒಟ್ಟಾರೆ ಸ್ಮಾರ್ಟ್ ಟಿವಿ ಪಾಲು 2020 ರಲ್ಲಿ 67 ಪ್ರತಿಶತ ಇತ್ತು. 2021 ರಲ್ಲಿ ಈ ಪ್ರಮಾಣ ಶೇ. 84ಕ್ಕೆ ಏರಿಕೆಯಾಗಿದೆ.

"ಹೊಸ ಬ್ರ್ಯಾಂಡ್‌ಗಳು OLED ಮತ್ತು QLED ನಂತಹ ಸುಧಾರಿತ ಡಿಸ್‌ಪ್ಲೇ ತಂತ್ರಜ್ಞಾನಗಳನ್ನು ಆಕರ್ಷಕ ಬೆಲೆಯಲ್ಲಿ ನೀಡುತ್ತಿವೆ, ಇದು ವೀಕ್ಷಕರ ಅನುಭವವನ್ನನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತಿದೆ. ಜೊತೆಗೆ, ಡಾಲ್ಬಿ ಅಟ್ಮಾಸ್ ಮತ್ತು ವಿಷನ್, ಉತ್ತಮ ಧ್ವನಿ ವ್ಯವಸ್ಥೆ, ಹೆಚ್ಚಿನ ರಿಫ್ರೆಶ್ ದರ ಮತ್ತು ದೊಡ್ಡ ಪರದೆಯ ಗಾತ್ರದಂತಹ ವೈಶಿಷ್ಟ್ಯಗಳು ಖರೀದಿದಾರರನ್ನು ಆಕರ್ಷಿಸುತ್ತಿವೆ" ಎಂದು ಸಂಶೋಧನಾ ವಿಶ್ಲೇಷಕ ಆಕಾಶ್ ಜಟ್ವಾಲಾ ಹೇಳುತ್ತಾರೆ.

ಇದನ್ನೂ ಓದಿ:ಯುದ್ಧ: ಕಳೆದ 10 ವರ್ಷದಲ್ಲೇ ಕಚ್ಚಾ ತೈಲದ ಬೆಲೆ ದಾಖಲೆಯ ಏರಿಕೆ.. ಗ್ರಾಹಕನ ಜೇಬಿಗೆ ಕತ್ತರಿ ಸಾಧ್ಯತೆ!!

2020ರಲ್ಲಿ 40-ಇಂಚಿನ ಮೇಲಿರುವ ಟಿವಿಗಳ ಪಾಲು ಶೇ.30ರಷ್ಟಿತ್ತು. ಇದು 2021ರಲ್ಲಿ ಶೇ.42ಕ್ಕೆ ತಲುಪಿದೆ. ಈ ಬೆಳವಣಿಗೆಯು ಭಾರತೀಯ ಗ್ರಾಹಕರು ದೊಡ್ಡ ಗಾತ್ರದ ಟಿವಿಗಳತ್ತ ಸಾಗುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ವಿಶೇಷವಾಗಿ OTTಯಲ್ಲಿ ಪ್ರಸಾರವಾಗುವ ಸಿನಿಮಾ, ಸೀರೀಸ್​ ಹಾಗೂ ಇತರ ಕಾರ್ಯಕ್ರಮಗಳನ್ನು ನೋಡಲು ಜನರು ಹೆಚ್ಚೆಚ್ಚು ಸ್ಮಾರ್ಟ್​ ಟಿವಿಯನ್ನು ಬಳಸುತ್ತಿದ್ದಾರೆ. ಆನ್‌ಲೈನ್ ಚಾನೆಲ್ ವೇಗವಾಗಿ ಬೆಳೆಯುತ್ತಲೇ ಇದೆ ಮತ್ತು ಅದರ ಕೊಡುಗೆಯು 2021 ರಲ್ಲಿ ಶೇಕಡಾ 31ಕ್ಕೆ ಏರಿದೆ ಎಂದು ಅವರು ತಿಳಿಸಿದರು.

ABOUT THE AUTHOR

...view details