ಕರ್ನಾಟಕ

karnataka

ETV Bharat / bharat

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85.5 ಲಕ್ಷಕ್ಕೆ ಏರಿಕೆ

ಭಾರತದಲ್ಲಿ ಈವರೆಗೆ 85.5 ಲಕ್ಷ ಕೋವಿಡ್​ ಕೇಸ್​ಗಳು ವರದಿಯಾಗಿದ್ದು, ಇವರಲ್ಲಿ ಶೇ.92.56 ರಷ್ಟು ಸೋಂಕಿತರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದಾರೆ.

India's total covid cases surge to 85,53,657
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 85.5 ಲಕ್ಷಕ್ಕೆ ಏರಿಕೆ

By

Published : Nov 9, 2020, 10:21 AM IST

ನವದೆಹಲಿ:ಇದು ಹಬ್ಬದ ಸಂದರ್ಭವಾಗಿದ್ದು, ದೇಶದಲ್ಲಿ ಕೋವಿಡ್​ ಕೇಸ್​ಗಳು ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ನಿರ್ಲಕ್ಷ್ಯ ವಹಿಸದೇ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ. ಆರು ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು, ಆಗಾಗಾ ಸಾಬೂನಿನಿಂದ ಕೈತೊಳೆಯುತ್ತಿರುವುದು ಹಾಗೂ ಮಾಸ್ಕ್​​ ಧರಿಸುವುದನ್ನು ಮರೆಯದಿರಿ ಎಂದು ಆರೋಗ್ಯ ಇಲಾಖೆ ನಿತ್ಯ ಎಚ್ಚರಿಕೆ ನೀಡುತ್ತಲೇ ಇದೆ.

ಆರೋಗ್ಯ ಇಲಾಖೆ ಟ್ವೀಟ್​

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 45,903 ಸೋಂಕಿತರು (ಭಾನುವಾರಕ್ಕಿಂತ 229 ಹೆಚ್ಚು ಕೇಸ್​ಗಳು) ಪತ್ತೆಯಾಗಿದ್ದು, 490 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 85,53,657 ಹಾಗೂ ಮೃತರ ಸಂಖ್ಯೆ 1,26,611ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ.92.56 ರಷ್ಟು (79,17,373) ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ 5,09,673 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್

ನವೆಂಬರ್​ 8ರ ವರೆಗೆ 11,85,72,192 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 8,35,401 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details