ಕರ್ನಾಟಕ

karnataka

ಆಗಸದಲ್ಲೇ ಭಾರತೀಯ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಿದ ಯುಎಇ ವಾಯುಪಡೆ

By

Published : Jun 24, 2022, 6:56 PM IST

ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್‌ಗೆ ತೆರಳುವಾಗ ಸುಖೋಯ್ ಸು-30 ಎಂಕೆಐ ಸಮರ ವಿಮಾನಗಳಿಗೆ ಯುಎಇ ವಿಮಾನ ಇಂಧನ ಸರಬರಾಜು ಮಾಡಿತು. ಇದಕ್ಕಾಗಿ ಭಾರತೀಯ ವಾಯುಪಡೆ ಧನ್ಯವಾದ ತಿಳಿಸಿದೆ.

indias-su-30mki-fighter-jets-get-refuelled-mid-air-by-uae-aircraft
ಆಕಾಶದಲ್ಲೇ ಭಾರತೀಯ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಿದ ಯುಎಇ ವಿಮಾನ

ನವದೆಹಲಿ:ತಡೆರಹಿತ ಹಾರಾಟಕ್ಕೆ ವಾಯುಪಡೆಯ ಎರಡು ಯುದ್ಧ ವಿಮಾನಗಳಿಗೆ ಆಕಾಶದಲ್ಲೇ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ) ವಾಯುಪಡೆಯ ಮತ್ತೊಂದು ವಿಮಾನದಿಂದ ಇಂಧನ ಪೂರೈಕೆ ಮಾಡಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.

ಯುದ್ಧತಂತ್ರದ ನಾಯಕತ್ವ ಕಾರ್ಯಕ್ರಮಕ್ಕಾಗಿ ಈಜಿಪ್ಟ್‌ಗೆ ತೆರಳುವಾಗ ಈ ವಿದ್ಯಮಾನ ನಡೆದಿದೆ. ಸುಮಾರು 6 ಗಂಟೆಗಳ ತಡೆರಹಿತ ಹಾರಾಟಕ್ಕಾಗಿ ಸುಖೋಯ್ ಸು-30 ಎಂಕೆಐ ಫೈಟರ್‌ಜೆಟ್‌ಗಳಿಗೆ ಯುಎಇ ವಾಯು ಪಡೆಯ ಎಂಆರ್​ಟಿಟಿ ವಿಮಾನ ಇಂಧನ ಸರಬರಾಜು ಮಾಡಿತು. ಈ ವಿಮಾನ ಇಂಧನ ತುಂಬುವಿಕೆ ಕಾರ್ಯವನ್ನು ಭಾರತೀಯ ವಾಯುಪಡೆಯು ಮುಕ್ತವಾಗಿ ಪ್ರಶಂಸಿಸುತ್ತದೆ ಎಂದು ಐಎಎಫ್​ ಟ್ವೀಟ್​ ಮಾಡಿದೆ.

ಇದನ್ನೂ ಓದಿ:ಮೇಡ್‌ ಇನ್ ಇಂಡಿಯಾ ಯುದ್ಧ ವಾಹನ ಚಲಾಯಿಸಿ ಪರೀಕ್ಷಿಸಿದ ಸೇನಾಧಿಕಾರಿ: ವಿಡಿಯೋ

ABOUT THE AUTHOR

...view details