ಕರ್ನಾಟಕ

karnataka

ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆ: ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ..

By

Published : Nov 26, 2021, 6:25 PM IST

ಭಾರತದ ಒಟ್ಟು ಫಲವತ್ತತೆ ದರ 2ಕ್ಕೆ ಇಳಿಕೆಯಾಗಿದ್ದು, ಜನಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಹೇಳಿದೆ.

ಭಾರತದ ಜನಸಂಖ್ಯೆ
Population of India

ನವದೆಹಲಿ: ಭಾರತದ ಜನಸಂಖ್ಯೆ 138 ಕೋಟಿ ಗಡಿ ದಾಟಿದೆ. ಆದರೆ, 2019 ರಿಂದ 2021ರ ಅವಧಿಯಲ್ಲಿ ಹೆಚ್ಚಾಗಿ ಭಾರತೀಯ ಮಹಿಳೆಯರು ಎರಡು ಮಕ್ಕಳಿಗೆ ಮಾತ್ರ ಜನ್ಮ ನೀಡಿದ್ದು, ದೇಶದ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಭಾರತದ ಒಟ್ಟು ಫಲವತ್ತತೆ ದರ2ಕ್ಕೆ ಇಳಿಕೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5)ರ ಎರಡನೇ ಹಂತದ ಫಲಿತಾಂಶಗಳ ಪ್ರಕಾರ, ಭಾರತದಲ್ಲಿ ಜನನ ಮತ್ತು ಮರಣಗಳ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು 2.1ರಷ್ಟು ಫಲವತ್ತತೆ ದರ, ಅಂದರೆ ಒಬ್ಬ ಮಹಿಳೆ ಜನ್ಮ ನೀಡುವ ಪ್ರಮಾಣ ಅಗತ್ಯವಿದೆ. ಈ ಪ್ರಮಾಣವು ದೇಶದ ಜನಸಂಖ್ಯೆಯಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳುತ್ತದೆ. ಆದರೆ ಈ ಪ್ರಮಾಣ 2019-21ರ ಅವಧಿಯಲ್ಲಿ 2ಕ್ಕೆ ಇಳಿಕೆಯಾಗಿದ್ದು, ಭಾರತದ ಜನಸಂಖ್ಯೆಯು ಈಗ ಕಡಿಮೆಯಾಗಲು ಶುರುವಾಗಿದೆ.

ಇದನ್ನೂ ಓದಿ: ಈ ರಾಜ್ಯದಲ್ಲಿ ಅತಿ ಹೆಚ್ಚು ಮಕ್ಕಳಿರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ!

1998-99ರ ಅವಧಿಯಲ್ಲಿ ದೇಶದ ಒಟ್ಟು ಫಲವತ್ತತೆ ದರ (ಟಿಎಫ್​ಆರ್​) 3.2 ಇತ್ತು. ಐದು ವರ್ಷಗಳ ಹಿಂದೆ ಈ ಪ್ರಮಾಣ 2.2ಕ್ಕೆ ಕುಸಿಯಿತು. ಇದೀಗ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮೇಘಾಲಯ ಮತ್ತು ಮಣಿಪುರ - ಈ ಐದು ರಾಜ್ಯಗಳನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಫಲವತ್ತತೆ ದರ ಕಡಿಮೆಯಾಗಿದೆ.

ಸಿಕ್ಕಿಂ ರಾಜ್ಯದಲ್ಲಿ ಅತಿ ಕಡಿಮೆ ಫಲವತ್ತತೆ ದರ

ದೇಶದ ಅತ್ಯಂತ ಕಡಿಮೆ ಫಲವತ್ತತೆ ದರ (1.1 ಟಿಎಫ್​ಆರ್) ಹೊಂದಿರುವ ರಾಜ್ಯ ಸಿಕ್ಕಿಂ ಆಗಿದ್ದು, 1.3ರೊಂದಿಗೆ ಲಡಾಖ್ ನಂತರದ ಸ್ಥಾನದಲ್ಲಿದೆ. ಗೋವಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಹ 1.3 ಟಿಎಫ್​ಆರ್ ಅನ್ನು ಹೊಂದಿವೆ. ಉತ್ತರ ಪ್ರದೇಶದಲ್ಲಿ 2.7 ರಿಂದ 2.4 ಕ್ಕೆ ಹಾಗೂ ಬಿಹಾರದಲ್ಲಿ 3.4 ರಿಂದ 3ಕ್ಕೆ ಇಳಿಕೆ ಕಂಡಿದೆಯಷ್ಟೇ.

ಇನ್ನು, 18 ವರ್ಷವಾಗುವ ಮುನ್ನ ಮದುವೆಯಾಗುವ ಮಹಿಳೆಯರ ಪ್ರಮಾಣ ಶೇ. 26.6 ರಿಂದ ಶೇ. 23.3ಕ್ಕೆ ಇಳಿದಿದೆ. ಇದರರ್ಥ, ಸುಮಾರು ನಾಲ್ಕು ಮಹಿಳೆಯರಲ್ಲಿ ಒಬ್ಬರು 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗುತ್ತಿದ್ದಾರೆ. ಜನನ ನಿಯಂತ್ರಣ ವಿಧಾನ ಅಥವಾ ಆಧುನಿಕ ಗರ್ಭನಿರೋಧಕ ವಿಧಾನ ಬಳಸುವವರ ಸಂಖ್ಯೆ ದೇಶದಲ್ಲಿ ಏರಿಕೆಯಾಗಿದೆಯಾದರೂ, ಮೂವರಲ್ಲಿ ಒಬ್ಬ ಮಹಿಳೆ ಇದನ್ನು ಬಳಸುತ್ತಿಲ್ಲ ಹಾಗೂ ಕೆಲವರಿಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ.

ಇದನ್ನೂ ಓದಿ: ಚೀನಾದಲ್ಲಿ 3 ಮಕ್ಕಳ ಪರಿಷ್ಕೃತ ಕಾನೂನಿಗೆ ಕ್ಸಿ ಜಿನ್‌ಪಿಂಗ್ ಸರ್ಕಾರ ಒಪ್ಪಿಗೆ

ABOUT THE AUTHOR

...view details