ಕರ್ನಾಟಕ

karnataka

ETV Bharat / bharat

ಭಾರತದ ಅತಿ ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಇನ್ನಿಲ್ಲ

ಭಾರತದ ಅತಿ ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಮೃತಪಟ್ಟಿದೆ. ಜೈಪುರದ ನಾಹರ್​ಗಢದಲ್ಲಿರುವ ಆಶ್ರಯ ಕೇಂದ್ರದಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ness Begum died
ಶೇರ್ನಿ ಬೇಗಂ

By

Published : Jan 4, 2021, 5:42 PM IST

ಜೈಪುರ (ರಾಜಸ್ಥಾನ): ಭಾರತದ ಅತಿ ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಮೃತಪಟ್ಟಿದೆ. ಜೈಪುರದ ನಾಹರ್​ಗಢದಲ್ಲಿರುವ ಆಶ್ರಯ ಕೇಂದ್ರದಲ್ಲಿದ್ದ ಸುಮಾರು 30 ವರ್ಷದ ಬೇಗಂ ಇಂದು ಮಧ್ಯಾಹ್ನ ಮೃತಪಟ್ಟಿದೆ. ಸಿಂಹಿಣಿಯದ್ದು ಸಹಜ ಸಾವು ಎಂದು ವೈದ್ಯಕೀಯ ವರದಿ ಬಂದ ಬಳಿಕ ಆಶ್ರಯ ಕೇಂದ್ರದಲ್ಲಿಯೇ ಅಂತ್ಯಕ್ರಿಯೆ ಮಾಡಲಾಯಿತು.

ಹಿರಿಯ ಸಿಂಹಿಣಿ ‘ಶೇರ್ನಿ ಬೇಗಂ’ ಇನ್ನಿಲ್ಲ

2005 ರಲ್ಲಿ ಅಂದರೆ ಶೇರ್ನಿ ಬೇಗಂಗೆ 15 ವರ್ಷ ವಯಸ್ಸಾಗಿದ್ದಾಗ ಜಾರ್ಖಂಡ್​ನ ನಟರಾಜ ಸರ್ಕಸ್​ನಿಂದ ಜೈಪುರಕ್ಕೆ ತರಲಾಯಿತು. ಸುಮಾರು 1 ವರ್ಷದ ಹಿಂದೆ ಬೇಗಂ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಹಿರಿಯ ಪಶು ವೈದ್ಯ ಡಾ. ಅರವಿಂದ್ ಮಾಥುರ್ ನೇತೃತ್ವದ ತಂಡ ಚಿಕಿತ್ಸೆ ನೀಡಿದ್ದರಿಂದ ಗುಣಮುಖವಾಯಿತು. ಬಳಿಕ ವಯೋಸಹಜ ಕಾಯಿಲೆಗಳು ಕಾಣಿಸಿಕೊಂಡವು. ಎಷ್ಟೇ ಚಿಕಿತ್ಸೆ ಕೊಡಿಸಿದರೂ ಚೇತರಿಕೆ ಕಂಡು ಬಂದಿರಲಿಲ್ಲ.

ಸಿಂಹಿಣಿಗೆ ವಯಸ್ಸಾಗಿದ್ದರಿಂದ ಬಾಯಿಯಲ್ಲಿ ಹಲ್ಲುಗಳಿರಲಿಲ್ಲ. ಯಾವ ಆಹಾರವನ್ನೂ ಸೇವಿಸಲಾಗ್ತಿರ್ಲಿಲ್ಲ. ಕೊಚ್ಚಿದ ಮಾಂಸ ತುಂಡುಗಳನ್ನು ಮಾತ್ರ ಸೇವಿಸುತ್ತಿತ್ತು ಎಂದು ಡಿಎಫ್​ಓ ಉಪಕಾರ್ ಬೋರಾನಾ ತಿಳಿಸಿದ್ದಾರೆ.

ABOUT THE AUTHOR

...view details