ಕರ್ನಾಟಕ

karnataka

ETV Bharat / bharat

100 ಡಿಗ್ರಿ ಸೆಲ್ಸಿಯಸ್​ನಲ್ಲೂ ಇಡಬಹುದು ಈ ವ್ಯಾಕ್ಸಿನ್​.. ಹೊಸ ಕೋವಿಡ್ ಲಸಿಕೆ ಅಭಿವೃದ್ಧಿ ಪಡಿಸಿದ ಭಾರತ - ಹೊಸ ಶಾಖ-ಸಹಿಷ್ಣು ಕೋವಿಡ್ -19 ಲಸಿಕೆ ಅವಿಷ್ಕಾರ

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಬಯೋಟೆಕ್ ಸ್ಟಾರ್ಟ್‌ಅಪ್ ಮೈನ್‌ವಾಕ್ಸ್ ಅಭಿವೃದ್ಧಿಪಡಿಸುತ್ತಿರುವ ಹೊಸ ಶಾಖ-ಸಹಿಷ್ಣು ಕೋವಿಡ್ -19 ಲಸಿಕೆ ಡೆಲ್ಟಾ ಮತ್ತು ಓಮಿಕ್ರಾನ್ ಸೇರಿದಂತೆ ಕೋವಿಡ್ ರೂಪಾಂತರಗಳ ವಿರುದ್ಧ ಬಲವಾದ ಪ್ರತಿಕಾಯಗಳನ್ನು ತೋರಿಸಿದೆ ಎಂದು ಇಲಿಗಳ ಮೇಲೆ ನಡೆಸಿದ ಅಧ್ಯಯನದ ಮೂಲಕ ತಿಳಿದುಬಂದಿದೆ.

India's new Covid vax candidate
ಹೊಸ ಕೋವಿಡ್ ಲಸಿಕೆ ಅಭಿವೃದ್ಧಿ ಪಡಿಸಿದ ಭಾರತ

By

Published : Apr 17, 2022, 10:49 AM IST

ನವದೆಹಲಿ:ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಬಯೋಟೆಕ್ ಸ್ಟಾರ್ಟ್‌ಅಪ್ ಮೈನ್‌ವಾಕ್ಸ್ ಹೊಸ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಹೆಚ್ಚು ಶಾಖವನ್ನು ತಡೆದುಕೊಳ್ಳುವ ಶಕ್ತಿ ಹೊಂದಿದ್ದು, ಡೆಲ್ಟಾ ಮತ್ತು ಓಮಿಕ್ರಾನ್ ಸೇರಿದಂತೆ ಕೋವಿಡ್ ರೂಪಾಂತರಗಳ ವಿರುದ್ಧ ಬಲವಾದ ಪ್ರತಿಕಾಯವನ್ನು ಸೃಷ್ಟಿಸಿದೆ ಎಂದು ಅಧ್ಯಯನ ತಿಳಿಸಿದೆ.

ಈ ಕೋವಿಡ್-19 ಲಸಿಕೆಯನ್ನು 37 ಡಿಗ್ರಿ ಸೆಲ್ಸಿಯಸ್‌ನಲ್ಲಿ ನಾಲ್ಕು ವಾರಗಳವರೆಗೆ ಮತ್ತು 100 ಡಿಗ್ರಿ ಸೆಲ್ಸಿಯಸ್‌ನಲ್ಲಿ 90 ನಿಮಿಷಗಳವರೆಗೆ ಸಂಗ್ರಹಿಸಿಡಬಹುದಾಗಿದೆ. ಈ ಲಸಿಕೆಗೆ ರಿಸೆಪ್ಟರ್-ಬೈಂಡಿಂಗ್ ಡೊಮೇನ್ ಎಂಬ ವೈರಲ್ ಸ್ಪೈಕ್ ಪ್ರೊಟೀನ್‌ನ ಒಂದು ಭಾಗವನ್ನು ಬಳಸಲಾಗಿದೆ. ಅದು ವೈರಸ್ ಅನ್ನು ಸೋಂಕಿಸಲು ಹೋಸ್ಟ್ ಸೆಲ್‌ನೊಂದಿಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಪೀರ್-ರಿವ್ಯೂಡ್ ಜರ್ನಲ್​ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಇದು ಡೆಲ್ಟಾ ಮತ್ತು ಓಮಿಕ್ರಾನ್ ಸೇರಿದಂತೆ ಪ್ರಮುಖ ಕೊರೊನಾವೈರಸ್ ರೂಪಾಂತರಗಳ ವಿರುದ್ಧ ಹೊರಾಡಲಿದೆ ಎಂದು ತಿಳಿದುಬಂದಿದೆ.

ಲಸಿಕೆಯ ವಿವಿಧ ಸೂತ್ರೀಕರಣಗಳೊಂದಿಗೆ ಈ ಲಸಿಕೆ ಪಡೆದ ಇಲಿಗಳು SARS-CoV-2 ರೂಪಾಂತರಗಳಾದ VIC31 (ರೆಫರೆನ್ಸ್ ಸ್ಟ್ರೈನ್), ಡೆಲ್ಟಾ ಮತ್ತು ಕೊರೊನಾ ವೈರಸ್​​​ ಓಮಿಕ್ರಾನ್ ರೂಪಾಂತರಗಳನ್ನು ತಟಸ್ಥಗೊಳಿಸುವ ಪ್ರತಿಕಾಯಗಳ ಹೊಂದಿದೆ ಎಂದು ಅಧ್ಯಯನವು ಕಂಡುಕೊಂಡಿದೆ. ಅಧ್ಯಯನದ ಪ್ರಕಾರ, VIC31 ಗೆ ಹೋಲಿಸಿದರೆ, Mynvax ಲಸಿಕೆಯ ಒಂದು ಸೂತ್ರೀಕರಣಕ್ಕಾಗಿ Omicron ರೂಪಾಂತರದ ವಿರುದ್ಧ ತಟಸ್ಥಗೊಳಿಸುವಿಕೆಯಲ್ಲಿ ಸರಾಸರಿ 14.4-ಪಟ್ಟು ಕಡಿತ ಮತ್ತು ಇನ್ನೊಂದು ಸೂತ್ರೀಕರಣಕ್ಕೆ 16.5-ಪಟ್ಟು ಕಡಿಮೆಯಾಗಿದೆ.

ಇದನ್ನೂ ಓದಿ:ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿ ತಂದೆ!

For All Latest Updates

ABOUT THE AUTHOR

...view details