ಕರ್ನಾಟಕ

karnataka

ETV Bharat / bharat

ವೈರಸ್​ ಚೈನ್​ ತುಂಡರಿಸಲು ರಾಷ್ಟ್ರವ್ಯಾಪಿ ಲಾಕ್​ಡೌನ್​ ಮಾಡಿ: ಮೋದಿಗೆ ವೈದ್ಯಕೀಯ ಸಂಘ ಮನವಿ! - Medical Association call for nationwide lockdown

ಕೋವಿಡ್ -19 ಪ್ರಸರಣದ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ನಿರ್ಣಾಯಕ ಹಂತವಾಗಿ ರಾಷ್ಟ್ರವ್ಯಾಪಿ ಲಾಕ್​ಡೌನ್ ವಿಧಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೇವೆ ಎಂದು ಕೋವಿಡ್ -19 ಕಾರ್ಯಪಡೆಯ ಸದಸ್ಯರು, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

lockdown
lockdown

By

Published : May 3, 2021, 5:58 PM IST

ನವದೆಹಲಿ: ಸರ್ಕಾರದ ಕೋವಿಡ್ -19 ಕಾರ್ಯಪಡೆಯ ಸದಸ್ಯರು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೇರಿದಂತೆ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯ ಪ್ರಮುಖ ಪಾಲುದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೈರಸ್​​ ಹಬ್ಬುವಿಕೆಯ ಸರಪಳಿ ತುಂಡರಿಸಲು ಮತ್ತು ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆ ಮರುಸ್ಥಾಪಿಸಲು ರಾಷ್ಟ್ರವ್ಯಾಪಿಯಾಗಿ ಕನಿಷ್ಠ ಎರಡು ವಾರಗಳ ಕಾಲ ಲಾಕ್‌ಡೌನ್ ವಿಧಿಸುವಂತೆ ಮನವಿ ಮಾಡಿದ್ದಾರೆ.

ಕೋವಿಡ್ -19 ಪ್ರಸರಣದ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ನಿರ್ಣಾಯಕ ಹಂತವಾಗಿ ರಾಷ್ಟ್ರವ್ಯಾಪಿ ಲಾಕ್​ಡೌನ್ ವಿಧಿಸುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೇವೆ' ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

ಡಾ.ಜಯಲಾಲ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರ, ಕೋವಿಡ್ -19 ಕಾರ್ಯಪಡೆಯ ಸದಸ್ಯರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ್ದರು.

ಭಾರತೀಯ ವೈದ್ಯಕೀಯ ಸಂಘ

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಕೊನೆ ಅಸ್ತ್ರವಾದ ಲಾಕ್‌ಡೌನ್‌ಗೆ ಕರೆ ನೀಡಲಾಗಿದೆ. ಭಾರತದಾದ್ಯಂತ ಸಕ್ರಿಯ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಸಾಂಕ್ರಾಮಿಕವು ಈಗ ಶ್ರೇಣಿ 2 ಮತ್ತು 3 ನಗರಗಳಿಗೆ ಹರಡಿತು ಎಂಬ ಆತಂಕದ ತೊಂದರೆ ಹೆಚ್ಚಾಗಿದೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ, ನಗರ ಪ್ರದೇಶ ಮತ್ತು ಮಹಾನಗರಗಳ ಮೇಲೆ ಪರಿಣಾಮ ಬೀರಿತ್ತು.

ಕನಿಷ್ಠ ಸಂಭವನೀಯ ಆರೋಗ್ಯ ವಿತರಣಾ ವ್ಯವಸ್ಥೆ ಹೊಂದಲು, ಈ ನಿರ್ಣಾಯಕ ಕ್ಷಣದಲ್ಲಿ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯಲು ನಾವು ಒತ್ತು ನೀಡಬೇಕಾಗಿದೆ. ಕನಿಷ್ಠ ಎರಡು ವಾರಗಳವರೆಗೆ ಲಾಕ್‌ಡೌನ್ ಖಾತ್ರಿಪಡಿಸಿಕೊಳ್ಳುವಂತೆ ನಾವು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೇವೆ. ಅದು ನಮಗೆ ಸಾಕಷ್ಟು ಸಮಯ ನೀಡುತ್ತದೆ. ನಮ್ಮ ಆಸ್ಪತ್ರೆಯ ಮೂಲಸೌಕರ್ಯ, ಉನ್ನತೀಕರಣ ಮತ್ತು ನವೀಕರಣಕ್ಕೆ ನೆರವಾಗಲಿದೆ ಎಂದು ಡಾ ಜಯಲಾಲ್ ಹೇಳಿದರು.

ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಭಾರತವನ್ನು ಅಪ್ಪಳಿಸಿದಾಗಿನಿಂದಲೂ ದೇಶದ ಆರೋಗ್ಯ ವ್ಯವಸ್ಥೆಯು ಹಾಸಿಗೆ, ಆಮ್ಲಜನಕದ ಕೊರತೆ ಮತ್ತು ಆರೋಗ್ಯ ವ್ಯವಸ್ಥೆ ಕಾಡುವ ಐಸಿಯು ಸೌಲಭ್ಯಗಳ ಕೊರತೆಯಿಂದ ಕುಸಿದಿದೆ. ಸಕ್ರಿಯ ಕೋವಿಡ್ -19 ಪ್ರಕರಣಗಳಲ್ಲಿ ದೇಶವು ತ್ವರಿತ ವೇಗದಲ್ಲಿ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3.68 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಮತ್ತು 3,417 ಸಾವುಗಳು ವರದಿಯಾಗಿವೆ. ಸೋಮವಾರದ ಒಟ್ಟು ಸಂಖ್ಯೆ ಭಾನುವಾರದ ಸ್ಪೈಕ್‌ಗಿಂತ ಶೇ 6ರಷ್ಟು ಕಡಿಮೆಯಾಗಿದೆ. ನಮಗೆ ನಿರಂತರ ಮತ್ತು ಪ್ರತ್ಯೇಕ ಲಾಕ್‌ಡೌನ್ ಅಗತ್ಯವಿದೆ ಎಂದು ಒತ್ತಾಯಿಸಿದರು.

ಲಾಕ್​ಡೌನ್​ಗೆ ಹೋಗುವ ಮೊದಲು ಸರ್ಕಾರವು ಎಲ್ಲಾ ಸಂಗತಿಗಳನ್ನು ಪರಿಗಣಿಸುತ್ತಿದೆ. ಅಂತಹ ನಿರ್ಧಾರವು ಸಾಮಾನ್ಯ ಜನರ ಮೇಲೆ, ಅದರಲ್ಲಿ ವಿಶೇಷವಾಗಿ ವಲಸೆ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಲಾಕ್‌ಡೌನ್ ದೇಶದ ಆರ್ಥಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ ಎಂದರು.

ವ್ಯಾಕ್ಸಿನೇಷನ್ ರೋಗದ ವಿರುದ್ಧ ಹೋರಾಡಲು ಪ್ರಸ್ತುತ ನಮ್ಮ ಕೈಯಲ್ಲಿರುವ ಏಕೈಕ ಸಾಧನವಾಗಿದೆ. ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಎಲ್ಲರಿಗೂ ಕೋವಿಡ್ ಸಂಬಂಧಿತ ಆರೋಗ್ಯ ಯೋಜನೆಯನ್ನು ವಿಸ್ತರಿಸುವಂತೆ ಪ್ರಧಾನಿ ಅವರೊಂದಿಗಿನ ಸಭೆಯಲ್ಲಿ ಡಾ.ಜಯಲಾಲ್ ಅವರು ಮನವಿ ಮಾಡಿದ್ದಾರೆ.

ಆರೋಗ್ಯ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಆರೋಗ್ಯ ವೃತ್ತಿಪರರ ಮನೋಸ್ಥೈರ್ಯ ಹೆಚ್ಚಿಸಲು ಉತ್ತಮ ಉಪಕ್ರಮವಾಗಿತ್ತು. ಕೋವಿಡ್ -19 ವಿರುದ್ಧ ಕರ್ತವ್ಯದಲ್ಲಿ ಸಾವನ್ನಪ್ಪಿದ 756 ವೈದ್ಯರಲ್ಲಿ ಕೇವಲ 138 ಮಂದಿ ಮಾತ್ರ ವಿಮೆ ಪಡೆದಿದ್ದಾರೆ. ಕಾರ್ಯವಿಧಾನಗಳಲ್ಲಿನ ಅಡಚಣೆಗಳಿಂದಾಗಿ ಕೆಲವರಿಗೆ ಇನ್ನೂ ಕೈಸೇರಿಲ್ಲ ಎಂದು ಹೇಳಿದರು.

ಸ್ಪೀಡ್ ಪೋಸ್ಟ್‌ಗಳು ಮತ್ತು ಇತರ ಅಂಚೆ ಸೇವೆ ವಿತರಣಾ ವ್ಯವಸ್ಥೆಯಂತೆ, ನಾವು ರೆಮ್ಡೆಸಿವಿರ್​ ವಿತರಣೆಯನ್ನು ಮೊದಲಿನಿಂದ ಕೊನೆಯವರೆಗೆ ಟ್ರ್ಯಾಕ್ ಮಾಡಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದರೆ, ಸರಕುಗಳ ಕಪ್ಪು ಮಾರುಕಟ್ಟೆ ಕಡಿಮೆ ಆಗುತ್ತದೆ ಎಂದರು.

ABOUT THE AUTHOR

...view details