ಛತ್ತೀಸ್ಗಢ: ಆಗ್ನೇಯ ಕೇಂದ್ರ ರೈಲ್ವೆ (ಎಸ್ಇಸಿಆರ್) ವಲಯದಲ್ಲಿ ಭಾರತೀಯ ರೈಲ್ವೆಯ ಅತಿ ಉದ್ದದ ಸರಕು ರೈಲು 'ವಾಸುಕಿ' ಹೊಸ ದಾಖಲೆ ನಿರ್ಮಿಸಿರುವ ಜೊತೆಗೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸರಕು ಸಾಗಣೆ ರೈಲು ಸುಮಾರು 3.5 ಕಿ.ಮೀ ಉದ್ದದ ಐದು ರೇಕ್ ಗಳನ್ನು ಒಂದೇ ಯುನಿಟ್ನ್ನಾಗಿ ಮಾಡಿಕೊಂಡು ಭಿಲಾಯ್ನಿಂದ ಕೊರ್ಬಾ ವರೆಗೆ 224 ಕಿ.ಮೀ ಸಂಚರಿಸುವ ಮೂಲಕ 'ವಾಸುಕಿ' ರೈಲು ಹೊಸ ಇತಿಹಾಸ ನಿರ್ಮಿಸಿದೆ. ಜೊತೆಗೆ ಈ ರೈಲನ್ನು ಕಲ್ಲಿದ್ದಲು ಸಾಗಣೆ ಮಾಡಲು ಬಳಸಲಾಗುತ್ತಿದ್ದು, ಅತೀ ವೇಗವಾಗಿ ಸಂಚರಿಸುತ್ತದೆ.
ಅತಿ ಹೆಚ್ಚು ಬೋಗಿಗಳನ್ನು ಅತಿ ಹೆಚ್ಚು ಕಿಮೀ ವರೆಗೂ ಹೊತ್ತೊಯ್ದಿದ್ದ ಹಲವು ದಾಖಲೆಗಳಿದ್ದು, 22 ಜನವರಿ 2021 ರಂದು ವಾಸುಕಿ ರೈಲು ಸುಮಾರು 5 ಸರಕು ಸಾಗಣೆ ರೈಲಿಗೆ ಸರಿಸಮನಾಗುವ 300 ಬೋಗಿಗಳನ್ನು ಒಂದೇ ಬಾರಿಗೆ ಹೊತ್ತೊಯ್ದಿದ್ದು, ಒಬ್ಬನೇ ಪೈಲಟ್, ಓರ್ವ ಲೊಕೋ ಪೈಲಟ್ ಹಾಗೂ ಓರ್ವ ಗಾರ್ಡ್ ಇದರಲ್ಲಿದ್ದರು. ಈ 'ಮೂಲಕ' ವಾಸುಕಿ ರೈಲು ಹೊಸ ದಾಖಲೆಯನ್ನೇ ಸೃಷ್ಟಿಸಿದೆ.