ಜೋಧಪುರ(ರಾಜಸ್ಥಾನ) :ಜ್ವರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಫಲೋಡಿ ಪಟ್ಟಣದಲ್ಲಿ ಭಾರತದ ಅತಿದೊಡ್ಡ 12 ಅಡಿ ಥರ್ಮಾಮೀಟರ್ ಸ್ಥಾಪಿಸಲಾಗಿದೆ. ಎಡಿಎಂ ಹಕಂ ಖಾನ್ ಹಾಗೂ ಎಸ್ ಡಿಎಂ ಡಾ.ಅರ್ಚನಾ ವ್ಯಾಸ್ ಇದನ್ನು ಲೋಕಾರ್ಪಣೆಗೊಳಿಸಿದ್ದಾರೆ.
ಈ ಥರ್ಮಾಮೀಟರ್ ಅನ್ನು ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಅಳವಡಿಸಿದ್ದು, ಜನರಲ್ಲಿ ಜ್ವರದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಇಂದು ಫಲೋಡಿಯಲ್ಲಿ ಇದನ್ನು ಸ್ಥಾಪಿಸಲಾಗಿದೆ. ಕಾರಣ 2016ರ ಮೇ 19 ರಂದು ಫಲೋಡಿಯ ತಾಪಮಾನವು 51 ಡಿಗ್ರಿಗಳಷ್ಟಿತ್ತು. ಇದು ದೇಶದಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿಸಲ್ಪಟ್ಟಿದೆ. ಈ ಥರ್ಮಾಮೀಟರ್ ಅನ್ನು ಒಂದು ವರ್ಷದವರೆಗೆ ಇಲ್ಲಿ ಸ್ಥಾಪಿಸಲಾಗುತ್ತದೆ. ಒಂದು ವರ್ಷದ ವರೆಗೂ ಇದು ಇಲ್ಲಿನ ತಾಪಮಾನವನ್ನು ತಿಳಿಸಲಿದೆ.