ನವದೆಹಲಿ: ಭಾರತದ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಒಂದು ಹೆಗ್ಗುರುತಿನ ಸಾಧನೆ ಮಾಡಿದ್ದು, ಒಟ್ಟು ಚೇತರಿಕೆ ಪ್ರಕರಣಗಳು ಒಂದು ಕೋಟಿಗಿಂತ ಅಧಿಕವಾಗಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 1,02,11,342ಕ್ಕೆ ತಲುಪಿದ್ದು, ದೇಶದ ಚೇತರಿಕೆಯ ಪ್ರಮಾಣ ಶೇ 96.59ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಹಿಂದಿನ ಸರ್ಕಾರಕ್ಕೆ ಆಧುನಿಕತೆಯ ಅರಿವಿರಲಿಲ್ಲ: ಮೆಟ್ರೋ ಯೋಜನೆಗೆ ಭೂಮಿ ಪೂಜೆ ಬಳಿಕ ಕಾಂಗ್ರೆಸ್ಗೆ ಮೋದಿ ಟಾಂಗ್
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 13,788 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ. 14,457 ಡಿಸ್ಚಾರ್ಜ್ ಮತ್ತು 145 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1,05,71,773 ಇದ್ದರೆ ಸಕ್ರಿಯ ಪ್ರಕರಣಗಳು 2,08,012ಕ್ಕೆ ತಲುಪಿದೆ. 1,02,11,342 ಪೀಡಿತರು ಆಸ್ಪತ್ರೆಯಿಂದ ಗುಣಮುಖರಾಗಿದ್ದು, 1,52,419 ಜನ ಮೃತಪಟ್ಟಿದ್ದಾರೆ.