ಕರ್ನಾಟಕ

karnataka

ETV Bharat / bharat

ಐತಿಹಾಸಿಕ ಸಾಧನೆ ತುದಿಯಲ್ಲಿ ಭಾರತ.. ನಾಳೆ ಬೆಳಗ್ಗೆ 100 ಕೋಟಿ Corona Vaccine ಪೂರ್ಣ ಸಾಧ್ಯತೆ - 1 ಬಿಲಿಯನ್​ ವ್ಯಾಕ್ಸಿನೇಷನ್​

ಕೋವಿಡ್​ ವ್ಯಾಕ್ಸಿನೇಷನ್​ ನೀಡುವ ವಿಚಾರದಲ್ಲಿ ಭಾರತ ಇದೀಗ ಐತಿಹಾಸಿಕ ಸಾಧನೆ ಬರೆಯಲು ಸಜ್ಜಾಗಿದ್ದು, ನಾಳೆ ಬೆಳಗ್ಗೆ 100 ಕೋಟಿ ಲಸಿಕೆ ನೀಡಿರುವ ಸಾಧನೆ ಮಾಡಲಿದೆ.

Covid vaccine
Covid vaccine

By

Published : Oct 20, 2021, 8:59 PM IST

Updated : Oct 20, 2021, 9:25 PM IST

ನವದೆಹಲಿ:ಕೋವಿಡ್​ ವ್ಯಾಕ್ಸಿನ್​ ನೀಡಲು ಆರಂಭವಾಗಿ 9 ತಿಂಗಳು ಪೂರ್ಣಗೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಭಾರತ ಐತಿಹಾಸಿಕ ಸಾಧನೆ ತುದಿಯಲ್ಲಿದೆ. ನಾಳೆ ಬೆಳಗ್ಗೆ 100 ಕೋಟಿ ಕೋವಿಡ್​ ವ್ಯಾಕ್ಸಿನ್ ಡೋಸ್​ ನೀಡಿರುವ ಸಾಧನೆ ಮಾಡಲಿದೆ.

ಕೋವಿಡ್​ ವ್ಯಾಕ್ಸಿನ್​ ಪಡೆಯುತ್ತಿರುವ ಮಹಿಳೆ

ಈಗಾಗಲೇ ಭಾರತದಲ್ಲಿ 99.4 ಕೋಟಿ ಕೋವಿಡ್​ ವ್ಯಾಕ್ಸಿನ್​ ನೀಡಲಾಗಿದ್ದು, ನಾಳೆ ಬೆಳಗ್ಗೆ 100 ಕೋಟಿ ಜನರಿಗೆ ವ್ಯಾಕ್ಸಿನ್​ ಹಾಕಿರುವ ಸಾಧನೆ ಮಾಡಲಿದ್ದು, ಕೇಂದ್ರ ಆರೋಗ್ಯ ಇಲಾಖೆಯಿಂದ ಅಧಿಕೃತ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ವಿಭಿನ್ನವಾಗಿ ಆಚರಣೆ ಮಾಡಲು ನಿರ್ಧಾರ

ನಾಳೆ 100 ಕೋಟಿ ವ್ಯಾಕ್ಸಿನ್​ ಪೂರ್ಣಗೊಳ್ಳಲಿರುವ ಕಾರಣ ಬಿಜೆಪಿ ಪ್ರಮುಖ ನಾಯಕರು ವಿವಿಧ ವ್ಯಾಕ್ಸಿನ್​​ ಸೆಂಟರ್​ಗಳಿಗೆ ಭೇಟಿ ನೀಡಲಿದ್ದು, ಸಂಭ್ರಮಾಚರಣೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಜೆಪಿ ನಡ್ಡಾ ಉತ್ತರಪ್ರದೇಶದ ಗಾಜಿಯಾಬಾದ್​, ಬಿಜೆಪಿ ಜನರಲ್​ ಸೆಕ್ರೆಟರಿ ಅರುಣ್​ ಸಿಂಗ್ ಹಾಶಗೂ ದುಷ್ಯತ್​ ಗೌತಮ್​​ ಕೊಯಂಬತ್ತೂರು ಹಾಗೂ ಲಖನೌಗೆ ಭೇಟಿ ನೀಡಲಿದ್ದಾರೆ.

ಇದನ್ನೂ ಓದಿರಿ:ಚೀನಾಗೆ ಸೆಡ್ಡು ಹೊಡೆಯಲು ಸಜ್ಜು.. ಅರುಣಾಚಲ ಗಡಿಯಲ್ಲಿ ಬೋಫೋರ್ಸ್​ ಫಿರಂಗಿ​ಗಳ ನಿಯೋಜನೆ!

ಭಾರತದಲ್ಲಿ 100 ಕೋಟಿ ಕೊರೋನಾ ಲಸಿಕೆ ಡೋಸ್ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ವಿಮಾನಗಳು, ಬಸ್ ನಿಲ್ದಾಣ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಇದರ ಬಗ್ಗೆ ಘೋಷಣೆ ಮಾಡಲು ನಿರ್ಧಾರ ಕೈಗೊಂಡಿದೆ.

ಈಗಾಗಲೇ ಚೀನಾದಲ್ಲಿ 100 ಕೋಟಿಗೂ ಅಧಿಕ ಜನರಿಗೆ ಕೋವಿಡ್​ ವ್ಯಾಕ್ಸಿನೇಷನ್​ ನೀಡಲಾಗಿದ್ದು, ಇದೀಗ ಭಾರತ ಕೂಡ ಈ ಮೈಲಿಗಲ್ಲು ನಿರ್ಮಾಣ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಾಖಲೆಯ 2.5 ಕೋಟಿ ಜನರಿಗೆ ವ್ಯಾಕ್ಸಿನ್​ ಹಾಕಲಾಗಿದೆ.

Last Updated : Oct 20, 2021, 9:25 PM IST

ABOUT THE AUTHOR

...view details