ಕೊಚ್ಚಿ, ಕೇರಳ:ಭಾರತದ ಮೊದಲ ಸ್ವದೇಶಿ ಏರ್ಕ್ರಾಫ್ಟ್ ಕ್ಯಾರಿಯರ್ ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿ ಸಮುದ್ರದಲ್ಲಿ ಪರೀಕ್ಷಾರ್ಥ ಪ್ರಯೋಗ ನಡೆಯಲಿದೆ. ಕೇರಳದ ಕೊಚ್ಚಿ ನೌಕಾನೆಲೆಯಲ್ಲಿ ಏರ್ಕ್ರಾಫ್ಟ್ ಕ್ಯಾರಿಯರ್ ನಿರ್ಮಾಣ ಕೊನೆಯ ಹಂತದಲ್ಲಿದೆ.
ಸ್ವದೇಶಿ ಏರ್ಕ್ರಾಫ್ಟ್ ಕ್ಯಾರಿಯರ್ ಅತ್ಯಂತ ಸಂಕೀರ್ಣವಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಮ್ಮೆಗೆ ಸುಮಾರು 30 ಏರ್ಕ್ರಾಫ್ಟ್ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ನೌಕೆಗೆ ಇರಲಿದೆ.
ಈ ನೌಕೆ ಸುಮಾರು 262 ಮೀಟರ್ ಉದ್ದವಿದ್ದು, 28 ನಾಟಿಕಲ್ ಮೈಲುಗಳ ವೇಗದಲ್ಲಿ ಚಲಿಸಬಲ್ಲದಾಗಿದೆ. ಇಷ್ಟು ಮಾತ್ರವಲ್ಲದೇ ಸುಮಾರು 1500 ನೌಕಾಪಡೆಯ ಸಿಬ್ಬಂದಿಗೆ ವಸತಿ ಒದಗಿಸುವ ಸಾಮರ್ಥ್ಯ ಈ ನೌಕೆಯಲ್ಲಿದೆ.