ಕ್ಯಾಲಿಫೋರ್ನಿಯಾ(ಅಮೆರಿಕ): ಶಾಖದ ಅಲೆಗಳು ಭಾರತದಲ್ಲಿ ತೀವ್ರ ಮತ್ತು ಮಾರಾಣಾಂತಿಕವಾಗಿದೆ. ಇದು ಸಾರ್ವಜನಿಕ ಆರೋಗ್ಯ, ಕೃಷಿ ಮತ್ತು ಇತರ ಸಾಮಾಜಿಕ ಆರ್ಥಿಕತೆ ಮತ್ತು ಸಂಸ್ಕೃತಿ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಕೆಂಬ್ರೀಡ್ಜ್ ಯುನಿವರ್ಸಿಟಿಯ ರಮಿತ್ ದೆಬ್ನಾಥ್ ಮತ್ತು ಅವರ ಸಹೋದ್ಯೋಗಿಗಳು ಈ ಕುರಿತು ಪಿಎಲ್ಒಎಸ್ ಕ್ಲೆಮೆಂಟ್ನಲ್ಲಿ ಪ್ರಕಟಿಸಿದ್ದಾರೆ. ಈ ಅಧ್ಯಯನದಲ್ಲಿ ಶಾಖದ ಅಲೆ, ಸುಸ್ಥಿರ ಅಭಿವೃದ್ಧಿ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತದ ಪ್ರಗತಿಗೆ ಇದು ಅಡ್ಡಿ ಮಾಡಲಿದೆ.
ಶೂನ್ಯ ಬಡತನ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಉದ್ಯೋಗ, ಆರ್ಥಿಕ ಬೆಳವಣಿಗೆ ಸೇರಿದಂತೆ 17ನೇ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಉದ್ದೇಶವನ್ನು ಪೂರೈಸಲು ಭಾರತ ಬದ್ದವಾಗಿದೆ. ಆದಾಗ್ಯೂ ಪ್ರಸ್ತುತ ಹವಾಮಾನ ಬದಲಾವಣೆ ದುಬರ್ಲತೆ ಇದರ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದೆ.
ಸುಸ್ಥಿರ ಅಭಿವೃದ್ಧಿ ಗುರಿ: ಭಾರತದ ಹವಾಮಾನ ದುರ್ಬಲತೆ ಸೂಚ್ಯಂಕದ ಜೊತೆಗೆ ಶಾಖದ ಸೂಚ್ಯಂಕದ ಕುರಿತು ಸಂಶೋಧಕರು ವಿಶ್ಲೇಷಣಾ ಮೌಲ್ಯ ಮಾಪನ ನಡೆಸಿದ್ದಾರೆ. ಇದಕ್ಕೆ ಸಾಮಾಜಿಕ ಆರ್ಥಿಕತೆ, ಜೀವನ ಕ್ರಮ, ಜೈವಿಕ ಭೌತಿಕ ಸೇರಿದಂತೆ ಹಲವುಗಳ ವಿಶ್ಲೇಷಣೆಯಿಂದ ಹವಾಮಾನ ದುರ್ಬಲತೆ ಮತ್ತು ಹೇಗೆ ಎಸ್ಡಿಜಿ ಅಭಿವೃದ್ಧಿ ಮೇಲೆ ಹವಾಮಾನ ಬದಲಾವಣೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದರ ತೀವ್ರತೆ ಮಟ್ಟ ವರ್ಗೀಕರಣಕ್ಕೆ ಭಾರತೀಯ ಸರ್ಕಾರದ ರಾಷ್ಟ್ರೀಯ ಡೇಟಾ ಮತ್ತು ಅನಾಲಿಟಿಕ್ಸ್ ಪ್ಲಾಟ್‌ಫಾರ್ಮ್‌ನಿಂದ ರಾಜ್ಯ ಮಟ್ಟದ ಹವಾಮಾನ ದುರ್ಬಲತೆಯ ಸೂಚಕಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ದತ್ತಾಂಶದಿಂದ ಈ ಮಾಹಿತಿ ಪಡೆಯಲಾಗಿದೆ. ಸಂಶೋಧಕರು 20 ವರ್ಷದಲ್ಲಿ (2001-2021)ರ ಎಸ್ಡಿಜಿ ನಿಟ್ಟಿನಲ್ಲಿ ಭಾರತದ ಪ್ರಗತಿಯನ್ನು ಹೋಲಿಕೆ ಮಾಡಿದ್ದಾರೆ