ನವದೆಹಲಿ:ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 18,346 ಹೊಸ ಕೋವಿಡ್-19 (COVID-19) ಪ್ರಕರಣಗಳು ದೃಢಪಟ್ಟಿದ್ದು, ಇದು 6 ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ದೇಶದಲ್ಲಿ 6 ತಿಂಗಳ ಬಳಿಕ ಅತಿ ಕಡಿಮೆ ಕೋವಿಡ್ ಸೋಂಕು ಪ್ರಕರಣ ದಾಖಲು - ಕೋವಿಡ್ 19
ದೇಶದಲ್ಲಿ ಸದ್ಯ 2,52,902 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಗುಣಮುಖರ ಪ್ರಮಾಣವು ಶೇ. 97.93ರಷ್ಟಾಗಿದೆ.
![ದೇಶದಲ್ಲಿ 6 ತಿಂಗಳ ಬಳಿಕ ಅತಿ ಕಡಿಮೆ ಕೋವಿಡ್ ಸೋಂಕು ಪ್ರಕರಣ ದಾಖಲು COVID-19](https://etvbharatimages.akamaized.net/etvbharat/prod-images/768-512-13263190-thumbnail-3x2-mng.jpg)
ಕೋವಿಡ್-19
ದೇಶದಲ್ಲೀಗ 2,52,902 ಪ್ರಕರಣಗಳು ಸಕ್ರಿಯವಾಗಿದೆ. ಗುಣಮುಖರ ಪ್ರಮಾಣವು ಶೇ. 97.93ರಷ್ಟಿದೆ. ನಿನ್ನೆ ಕೇರಳ ರಾಜ್ಯ ಒಂದರಲ್ಲಿಯೇ 8,850 ಕೊರೊನಾ ಪ್ರಕರಣ ದಾಖಲಾಗಿದ್ದು, 149 ಮಂದಿ ಮೃತಪಟ್ಟಿದ್ದಾರೆ.
ಸೋಮವಾರದಂದು ದೇಶದಲ್ಲಿ 20,799 ಹೊಸ ಸೋಂಕು ಪ್ರಕರಣ ದಾಖಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ವ್ಯಾಪಕ ಭಯದ ನಡುವೆಯೂ ಕೆಲ ದಿನಗಳಿಂದ ದೇಶದಲ್ಲಿ ಕಡಿಮೆ ಪ್ರಕರಣಗಳು ದಾಖಲಾಗುತ್ತಿದೆ.