ನಾಗ್ಪುರ: ಭಾರತದಲ್ಲಿ ಖಾಸಗಿಯಾಗಿ ನಿರ್ಮಿಸಲಾದ ಕ್ರಯೋಜನಿಕ್ ಇಂಜಿನ್ 'ಧವನ್-1' ಪರೀಕ್ಷೆ ಯಶಸ್ವಿಯಾಗಿ ಮಾಡಲಾಗಿದೆ. ದೇಶದ ಮೊದಲ ಖಾಸಗಿ ಕ್ರಯೋಜನಿಕ್ ಇಂಜಿನ್ ಪರೀಕ್ಷೆಯಾಗಿದೆ. ಧವನ್-1 ಎಂಬ ಹೆಸರಿನ ಈ ಇಂಜಿನ್ ಅನ್ನು ಸಂಪೂರ್ಣವಾಗಿ ದೇಶದಲ್ಲೇ ತಯಾರಿಸಲಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಈ ಇಂಜಿನ್ ಅಭಿವೃದ್ಧಿಪಡಿಸಿದೆ.
ಈ ಎಲ್ಎನ್ಜಿಯನ್ನು ಇಂಧನವಾಗಿ ಬಳಸಲಾಗುತ್ತಿದೆ. LNG ಬಳಕೆಯು ರಾಕೆಟ್ ಉಡಾವಣೆ ಮಾಡುವಾಗ ಪರಿಸರ ಹಾನಿ ಕಡಿಮೆ ಎಂಬುದು ಗಮನಾರ್ಹವಾಗಿದೆ. ಎಲ್ಎನ್ಜಿ ಬಳಕೆಯಿಂದ ಇಂಧನ ವೆಚ್ಚದಲ್ಲಿ ಶೇಕಡಾ 40 ರಷ್ಟು ಉಳಿತಾಯವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಈ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಅನ್ನು 3ಡಿ ಪ್ರಿಂಟಿಂಗ್ ಬಳಸಿ ಅಭಿವೃದ್ಧಿಪಡಿಸಲಾಗಿದ್ದು, ಶೇ.95ರಷ್ಟು ಉತ್ಪಾದನಾ ಅವಧಿ ಉಳಿತಾಯವಾಗಿದೆ. ಈ ಪ್ರಯೋಗದಿಂದಾಗಿ ಇಂಥ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದ ಜಗತ್ತಿನ ಬೆರಳೆಣಿಕೆಯ ಕಂಪನಿಗಳಲ್ಲಿ ನಮ್ಮದೂ ಒಂದು ಎಂಬ ಹೆಗ್ಗಳಿಕೆ ಸಿಕ್ಕಿದೆ ಎಂದು ಸ್ಕೈರೂಟ್ ಏರೋಸ್ಪೇಸ್ ಹೇಳಿದೆ.