ನವದೆಹಲಿ:ಪುಣೆ ಮೂಲದ ಜೆನ್ನೋವಾ ಬಯೋಫಾರ್ಮಾಸ್ಯುಟಿಕಲ್ಸ್ನ ಎಮ್ಆರ್ಎನ್ಎ ಕೋವಿಡ್ -19 ಲಸಿಕೆಯ 1/2 ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಕೇಂದ್ರದ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅನುಮತಿ ನೀಡಿದೆ.
ಇದು ಭಾರತದ ಮೊದಲ ಮೆಸೆಂಜರ್ ಆರ್‌ಎನ್‌ಎ (ಎಮ್ಆರ್ಎನ್ಎ) ಕೋವಿಡ್ ಲಸಿಕೆಯಾಗಿದೆ. ಜಾಗತಿಕವಾಗಿ ಯುಎಸ್ ಮೂಲದ ಫಾರ್ಮಾ ಕಂಪೆನಿ ಫಿಜರ್ ಇಂಕ್ ತನ್ನ ಎಮ್ಆರ್ಎನ್ಎ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.