ಜುನಾಗಢ (ಗುಜರಾತ್): ರಾಜ್ಯ ಹಾಗೂ ದೇಶದ ಮೊದಲ ಮಾನವ ಗ್ರಂಥಾಲಯವನ್ನು ಶುಕ್ರವಾರ ಜುನಾಗಢ ನಗರದಲ್ಲಿ ಜಿಲ್ಲಾಧಿಕಾರಿ ರಚಿತ್ ರಾಜ್ ಉದ್ಘಾಟಿಸಿದರು. ಡೆನ್ಮಾರ್ಕ್ ನಂತಹ ದೇಶಗಳು ಮಾನವ ಗ್ರಂಥಾಲಯ ವ್ಯವಸ್ಥೆ ಹೊಂದಿವೆ. ಈ ಮಾನವ ಗ್ರಂಥಾಲಯದಲ್ಲಿ ಪುಸ್ತಕಗಳು ಇರುವುದಿಲ್ಲ. ಬದಲಿಗೆ ಜನರು ತಮ್ಮ ವಿರಾಮದ ಸಮಯದಲ್ಲಿ ಇಲ್ಲಿಗೆ ಬಂದು ಅವರ ಸಂತೋಷ ಮತ್ತು ದುಃಖವನ್ನು ಪರಸ್ಪರ ಹಂಚಿಕೊಳ್ಳಬಹುದಾಗಿದೆ.
ಮಧ್ಯಾಹ್ನ ನೌಕರರು 1 ಗಂಟೆಯಿಂದ 3 ಗಂಟೆಯವರೆಗೆ ಇಲ್ಲಿ ಊಟ ಮಾಡಬಹುದು. ಅಷ್ಟೇ ಅಲ್ಲದೇ ಇತರ ಉದ್ಯೋಗಿಗಳೊಂದಿಗೆ ಮಾತನಾಡಬಹುದಾಗಿದೆ. ಮಾನವ ಲೈಬ್ರರಿ ಉದ್ಘಾಟನೆ ಬಳಿಕ ಮಾತನಾಡಿದ ಜುನಾಗಢ ಜಿಲ್ಲಾಧಿಕಾರಿ ರಚಿತ್ ರಾಜ್, ಪ್ರಸ್ತುತ ದಿನಗಳಲ್ಲಿ ನಾವೆಲ್ಲಾರೂ ಯಾಂತ್ರಿಕ ಜೀವನ ಶೈಲಿಯಲ್ಲಿ ಬದುಕುತ್ತಿದ್ದೇವೆ. ಹಾಗಾಗಿ ಇಂತಹ ಲೈಬ್ರರಿಗಳ ಅವಶ್ಯಕತೆ ಇದೆ ಎಂದರು.