ನವದೆಹಲಿ: ಭಾರತದ ಗ್ರಾಹಕ ಡಿಜಿಟಲ್ ಆರ್ಥಿಕತೆಯು 2030ರ ವೇಳೆಗೆ 800 ಬಿಲಿಯನ್ ಯುಎಸ್ಡಿ ತಲುಪುವ ನಿರೀಕ್ಷೆಯಿದೆ. ಈಗಾಗಲೇ ಇದು 2020ರಲ್ಲಿ 85-90 ಬಿಲಿಯನ್ ಡಾಲರ್ ಅಭಿವೃದ್ಧಿಯಾಗಿದೆ. ಇ-ಕಾಮರ್ಸ್ ಮತ್ತು ಎಡ್-ಟೆಕ್ನಂತಹ ಆನ್‌ಲೈನ್ ಸೇವೆಗಳನ್ನು ಬಲವಾಗಿ ಅಳವಡಿಸಿಕೊಳ್ಳುವುದರಿಂದ ಇದು ಸಾಧ್ಯವಾಗಿದೆ ಎಂದು ಸಲಹಾ ಸಂಸ್ಥೆ ರೆಡ್‌ಸೀರ್ ತಿಳಿಸಿದೆ.
ಅಮೆರಿಕ ಮತ್ತು ಚೀನಾ ನಂತರ ಭಾರತದ ಆನ್‌ಲೈನ್ ಚಿಲ್ಲರೆ ಮಾರುಕಟ್ಟೆಯು ಜಾಗತಿಕವಾಗಿ ಮೂರನೇ ಅತಿದೊಡ್ಡ ರಾಷ್ಟ್ರವಾಗಲಿದೆ. ವಾರ್ಷಿಕ ಒಟ್ಟು ಸರಕು ಮೌಲ್ಯ (ಜಿಎಂವಿ) 2021ರಲ್ಲಿ 55 ಬಿಲಿಯನ್ ಡಾಲರ್ ಮತ್ತು 2030ರ ವೇಳೆಗೆ ಅದು 350 ಬಿಲಿಯನ್ ಯುಎಸ್ಡಿ ತಲುಪಲಿದೆ. ಇದಲ್ಲದೆ, ಚಿಲ್ಲರೆ ವಹಿವಾಟಿನಲ್ಲಿ 2030 ರ ವೇಳೆಗೆ ಅಂದಾಜು 1.5 ಟ್ರಿಲಿಯನ್ ಸಾಧಿಸುವ ನಿರೀಕ್ಷೆಯಿದೆ ಎಂದು ವರದಿ ಮಾಡಿದೆ.
"ಇಂದು 50 ಪ್ರತಿಶತದಷ್ಟು ಗ್ರಾಹಕರು ಅನುಕೂಲಕ್ಕಾಗಿ ಆನ್‌ಲೈನ್ ಸೇವೆಗಳನ್ನು ಬಳಸುತ್ತಾರೆ. ಕೆಲವು ವರ್ಷಗಳ ಹಿಂದೆ ಸುಮಾರು 70 ಪ್ರತಿಶತದಷ್ಟು ಜನರು ಇದರಿಂದ ಹೊರತಾಗಿದ್ದರು. ಆದರೆ ಕೊರೊನಾ ಬಳಿಕ ಡಿಜಿಟಲ್ ಸೇವೆಗಳು ನಿಸ್ಸಂದೇಹವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸಿವೆ "ಎಂದು ರೆಡ್‌ಸೀರ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಹೇಳಿದರು.
ಇನ್ನು ಭಾರತಕ್ಕೆ ಚಿಪ್ ಉದ್ಯಮವಿಲ್ಲ. ಇದಕ್ಕೆ ಭಾರಿ ಹೂಡಿಕೆಗಳು ಬೇಕಾಗುತ್ತವೆ ಎಂದು ಮಾಜಿ ಇನ್ಫೋಸಿಸ್ ಕಾರ್ಯನಿರ್ವಾಹಕ ಮತ್ತು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವೀಸಸ್ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ಹೇಳಿದ್ದಾರೆ. ಆರ್‌ಐಎಲ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರ್ ಅವರಂತಹ ಕೈಗಾರಿಕೋದ್ಯಮಿಗಳಿಗೆ ಅರೆವಾಹಕ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಅವರು ಕರೆ ನೀಡಿದರು. ಏಕೆಂದರೆ ಚಿಪ್ಗಳಿಲ್ಲದೆ ನಮ್ಮ ಭವಿಷ್ಯದ ಎಲೆಕ್ಟ್ರಾನಿಕ್ಸ್ ಅಷ್ಟು ಉತ್ತಮವಾಗಿರುವುದಿಲ್ಲ" ಎಂದಿದ್ದಾರೆ.