ಕರ್ನಾಟಕ

karnataka

ETV Bharat / bharat

ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಕಲ್ಲಿದ್ದಲು ಆಮದಿನಲ್ಲಿ ಶೇ.20 ರಷ್ಟು ಏರಿಕೆ - ಎಂ-ಜಂಕ್ಷನ್ ಸರ್ವೀಸ್

ಕಳೆದ ವರ್ಷಕ್ಕೆ ಹೋಲಿಸಿದ್ರೆ, ಈ ವರ್ಷ ಕಲ್ಲಿದ್ದಲು ಆಮದಿನಲ್ಲಿ ಶೇಕಡಾ 20.64 ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಳೆಗಾಲ ಆರಂಭವಾದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕಲ್ಲಿದ್ದಲು ಸಂಗ್ರಹಿಸಲಾಗ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು
ಕಲ್ಲಿದ್ದಲು

By

Published : Jul 11, 2021, 2:02 PM IST

ನವದೆಹಲಿ: ದೇಶದಲ್ಲಿ ಕಲ್ಲಿದ್ದಲು ಆಮದು ಶೇ.20.4 ರಷ್ಟು ಏರಿಕೆಯಾಗಿದ್ದು 19.92 ದಶಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶವು 16.54 ಮೆಟ್ರಿಕ್​ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿತ್ತು ಎಂದು ಎಂ-ಜಂಕ್ಷನ್ ಸರ್ವೀಸ್ ವರದಿಯಲ್ಲಿ ತಿಳಿಸಿದೆ. ಈ ವರ್ಷದಲ್ಲಿ ಕಲ್ಲಿದ್ದಲು ಆಮದು ಶೇಕಡಾ 20.4 ರಷ್ಟು ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಭಾರತದಲ್ಲಿ ಕಲ್ಲಿದ್ದಲು ಆಮದು ಶೇ.25.4 ರಷ್ಟು ಏರಿಕೆ ಕಂಡಿದ್ದು, 42.19 ಮೆಟ್ರಿಕ್​ ಟನ್​ಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 33.63 ಮೆ.ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿತ್ತು.

ಮೇ ನಲ್ಲಿ 13.64 ಮೆ.ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಮೇ ತಿಂಗಳವರೆಗೆ 10.54 ಮೆಟ್ರಿಕ್​ ಟನ್​​ ಕಲ್ಲಿದ್ದಲನ್ನು ಮಾತ್ರ ಆಮದು ಮಾಡಿಕೊಳ್ಳಲಾಗಿತ್ತು. ಏಪ್ರಿಲ್-​ ಮೇ ತಿಂಗಳಲ್ಲಿ 22.82 ಮೆಟ್ರಿಕ್​ ಟನ್​ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗಿದ್ದು, ಈ ವರ್ಷ 28.96 ಮೆಟ್ರಿಕ್​ ಆಮದು ಮಾಡಿಕೊಳ್ಳಲಾಗಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ 9 ಮೆಟ್ರಿಕ್​ ಟನ್​ಗಿಂತಲೂ ಹೆಚ್ಚು ಕಲ್ಲಿದ್ದಲನ್ನು ತರಿಸಿಕೊಳ್ಳಲಾಗಿದೆ.

ಮಾನ್ಸೂನ್​ ಆರಂಭವಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಲ್ಲಿದ್ದಲನ್ನು ಸಂಗ್ರಹಿಸಲಾಗುತ್ತಿದೆ. ಮಳೆಗಾಲದಲ್ಲಿ ಆಮದು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಎಂ-ಜಂಕ್ಷನ್ ಸರ್ವೀಸಸ್ ಎಂಡಿ ಮತ್ತು ಸಿಇಒ ವಿನಯಾ ವರ್ಮಾ ತಿಳಿಸಿದ್ದಾರೆ.

ABOUT THE AUTHOR

...view details