ಕರ್ನಾಟಕ

karnataka

ETV Bharat / bharat

'ಆತ್ಮ ನಿರ್ಭರ​ ಭಾರತ'​ ಅಭಿಯಾನ​ ಹೆಚ್ಚು ನ್ಯಾಯ ಸಮ್ಮತ & ನ್ಯಾಯಯುತ: ರಾಮನಾಥ್​ ಕೋವಿಂದ್​ - 16ನೇ ಪ್ರವಾಸಿ ಭಾರತ್​ ದಿವಸ್​ ಕಾರ್ಯಕ್ರಮ

ಎರಡು ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರು ಯಶಸ್ಸು ಸಾಧಿಸಿದ್ದು, ಜಾಗತಿಕ ಯೋಗಕ್ಷೇಮದ ಮನೋಭಾವದಿಂದ ಉತ್ತಮ ಹೆಜ್ಜೆಯಾಗಿದೆ ಎಂದಿದ್ದಾರೆ.

President Ram Nath Kovind
President Ram Nath Kovind

By

Published : Jan 9, 2021, 8:49 PM IST

ನವದೆಹಲಿ:ಆತ್ಮ ನಿರ್ಭರ​ ಭಾರತ ಅಭಿಯಾನ ವಿಶ್ವ ಕ್ರಮವನ್ನು ಹೆಚ್ಚು ನ್ಯಾಯಸಮ್ಮತ ಮತ್ತು ನ್ಯಾಯಯುತವಾಗಿಸುತ್ತದೆ. ಇದರ ಜತೆಗೆ ಹೆಚ್ಚಿನ ಸಹಕಾರ ಮತ್ತು ಶಾಂತಿಯನ್ನು ಉತ್ತೇಜಿಸುತ್ತದೆ ಎಂದು ರಾಮನಾಥ್​ ಕೋವಿಂದ್​ ಹೇಳಿದ್ದಾರೆ.

16ನೇ ಪ್ರವಾಸಿ ಭಾರತ್​ ದಿವಸ್​-2021 ಉದ್ದೇಶಿಸಿ ಮಾತನಾಡಿದ ಅವರು, ಸ್ವಾವಲಂಬಿ ಭಾರತ, ಆತ್ಮ ನಿರ್ಭರ​ ಭಾರತ ಎಂಬ ಕಲ್ಪನೆಯು ಸ್ವಾರ್ಥ ಕೇಂದ್ರಿತ ವ್ಯವಸ್ಥೆ ಹುಡುಕುವುದು ಅಲ್ಲ ಎಂದಿದ್ದಾರೆ.

ಸರಕು ಮತ್ತು ಸೇವೆಗಳ ಲಭ್ಯತೆಯನ್ನ ಹೆಚ್ಚಿಸುವ ಮೂಲಕ ಜಾಗತಿಕ ಪೂರೈಕೆ ಸರಪಳಿ ಅಡೆತಡೆ ತಗ್ಗಿಸಲು ನಾವು ಕೊಡುಗೆ ನೀಡಲು ಉದ್ದೇಶಿಸಿದ್ದೇವೆ ಎಂದು ಹೇಳಿದರು. ಭಾರತದಲ್ಲಿ ಕೋವಿಡ್​-19 ಎರಡು ಲಸಿಕೆ ಅಭಿವೃದ್ಧಿಪಡಿಸುವುದು ಜಾಗತಿಕ ಯೋಗಕ್ಷೇಮ ಮನೋಭಾವದ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದಿದ್ದಾರೆ. ಎರಡು ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞರು ಯಶಸ್ಸು ಸಾಧಿಸಿದ್ದಾರೆ ಎಂದು ಅವರು ತಿಳಿಸಿದರು.

ABOUT THE AUTHOR

...view details