ನವದೆಹಲಿ :ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ.
ಈ ವಿಮಾನಗಳು ದೆಹಲಿಯಿಂದ ಬುಕಾರೆಸ್ಟ್ (ರೊಮೇನಿಯಾ) ಮತ್ತು ಬುಡಾಪೆಸ್ಟ್ (ಹಂಗೇರಿ)ನಿಂದ ಭಾರತೀಯರನ್ನು ಕರೆತರಲಿವೆ. ಇದರಲ್ಲಿ ಒಂದು ವಿಮಾನ ಈಗಾಗಲೇ ರೊಮೇನಿಯಾದಿಂದ 219 ಮಂದಿ ಭಾರತೀಯರನ್ನು ಹೊತ್ತು ತರುತ್ತಿದೆ. ಸಂಜೆ 6:30ರ ಸುಮಾರಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಸಂಜೆ 4ಕ್ಕೆ ವಿಮಾನ ಲ್ಯಾಂಡ್ ಆಗಲಿದೆ ಎಂಬ ಮಾಹಿತಿ ಇತ್ತು. ಇನ್ನೊಂದು ವಿಮಾನ ನವದೆಹಲಿಯಲ್ಲಿ ಲ್ಯಾಂಡ್ ಆಗಲಿದೆ. ವಿದೇಶಾಂಗ ಸಚಿವ ಜೈಶಂಕರ್ ಅವರೇ ಸ್ವತಃ ಈ ಕಾರ್ಯಾಚರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.