ನವದೆಹಲಿ: ಕೋವಾಕ್ಸಿನ್ ಎಂಬ ಕೋವಿಡ್ -19 ವಿರುದ್ಧದ ಭಾರತೀಯ ಲಸಿಕೆಯು ಜಾಗತಿಕ ಗಮನ ಸೆಳೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ಟ್ವೀಟ್ ಮೂಲಕ ಐಸಿಎಂಆರ್ ಮಾಹಿತಿ ನೀಡಿದ್ದು"ಐಸಿಎಂಆರ್-ಭಾರತ್ ಬಯೋಟೆಕ್ ಸಹಯೋಗದ ಉತ್ಪನ್ನವಾದ ಕೊರೊನಾ ವಿರುದ್ಧದ ಕೊವಾಕ್ಸಿನ್ ಲಸಿಕೆ ಗಮನಾರ್ಹ ಸಾಧನೆ ಮಾಡುತ್ತದೆ. ಮೊದಲ ಮತ್ತು ಎರಡನೇ ಹಂತದ ಕೋವಾಕ್ಸಿನ್ ಪ್ರಯೋಗ ಫಲಿತಾಂಶಗಳು ಭಾರತದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ದಾರಿ ಮಾಡಿಕೊಟ್ಟಿವೆ. ಪ್ರಸ್ತುತ 22 ಸ್ಥಳಗಳಲ್ಲಿ ಪ್ರಯೋಗ ನಡೆಯುತ್ತಿದೆ" ಎಂದು ತಿಳಿಸಿದೆ.