ಕರ್ನಾಟಕ

karnataka

ETV Bharat / bharat

ಬಿಹಾರದಲ್ಲೊಂದು 'ಪಾಕಿಸ್ತಾನ'.. ಇಲ್ಲಿ ಹಾರಾಡುತ್ತೆ ದೇಶದ ಹಮ್ಮೆಯ ತಿರಂಗಾ ಧ್ವಜ - ಪಾಕಿಸ್ತಾನದಲ್ಲೂ ಹಾರುತ್ತೆ ಹಮ್ಮೆಯ ತಿರಂಗಾ

ದೇಶಕ್ಕೆ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇದರ ಅಂಗವಾಗಿಯೇ ಕೇಂದ್ರ ಸರ್ಕಾರ 'ಹರ್ ಘರ್ ತಿರಂಗಾ' ಅಭಿಯಾನ ಕೈಗೊಂಡಿದೆ. ಈ 'ಪಾಕಿಸ್ತಾನ'ದಲ್ಲೂ ತಿರಂಗಾವನ್ನು ಹೆಮ್ಮೆಯಿಂದ ಹಾರಿಸಲಾಗುತ್ತದೆ.

indian-tricolor-flutters-gracefully-in-this-pakistan-in-bihar
ಬಿಹಾರದ ಪಾಕಿಸ್ತಾನದಲ್ಲೂ ಹಾರುತ್ತೆ ಹಮ್ಮೆಯ ತಿರಂಗ

By

Published : Aug 9, 2022, 4:26 PM IST

ಪೂರ್ಣಿಯಾ (ಬಿಹಾರ): ಪಾಕಿಸ್ತಾನ ಎಂದರೆ ಪ್ರತಿಯೊಬ್ಬ ಭಾರತೀಯನಿಗೂ ಮೊದಲು ನೆನಪಿಗೆ ಬರುವುದೇ ನಮ್ಮ ನೆರೆಯ ರಾಷ್ಟ್ರ. ಆದರೆ, ಬಿಹಾರದಲ್ಲೊಂದು ಪಾಕಿಸ್ತಾನ ಇದೆ. ಇಲ್ಲಿ ರಾಮನನ್ನು ಪೂಜಿಸಲಾಗುತ್ತದೆ ಹಾಗೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಗುತ್ತದೆ.

ಹೌದು, ಪೂರ್ಣಿಯಾ ಜಿಲ್ಲೆಯ ಪಾಕಿಸ್ತಾನ ಟೋಲಾ ಗ್ರಾಮವಾಗಿದೆ. ಇಲ್ಲಿ ಪ್ರತಿ ವರ್ಷ ಜನವರಿ 26ರ ಗಣರಾಜ್ಯೋತ್ಸವ ಮತ್ತು ಆಗಸ್ಟ್ 15ರ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಗ್ರಾಮದ ವಿಶೇಷವೆಂದರೆ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲ. ಇಲ್ಲಿ ಎಲ್ಲರೂ ಹಿಂದೂಗಳೇ ಇದ್ದಾರೆ.

ಪಾಕಿಸ್ತಾನ ಎಂಬ ಹೆಸರು ಹೇಗೆ ಬಂತು?: ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಈ ಗ್ರಾಮಕ್ಕೆ ಪಾಕಿಸ್ತಾನ ಟೋಲಾ ಎಂಬ ಹೆಸರು ಹೇಗೆ ಬಂತು ಹಾಗೂ ಯಾವಾಗ ಬಂತು ಎಂಬುದರ ಕುರಿತು ಎರಡು ಕಥೆಗಳಿವೆ.

ದೇಶ ವಿಭಜನೆಯ ಸಮಯದಲ್ಲಿ ಇಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ಕುಟುಂಬಗಳು ಪಾಕಿಸ್ತಾನಕ್ಕೆ ವಲಸೆ ಹೋದವು. ಇದಾದ ನಂತರ ಈ ಗ್ರಾಮಕ್ಕೆ ಪಾಕಿಸ್ತಾನ ಟೋಲಾ ಹೆಸರು ಬಂತು ಎಂದು ಕೆಲ ಹಿರಿಯರು ಹೇಳುತ್ತಾರೆ. ಮತ್ತೊಂದೆಡೆ, ಭಾರತ ಮತ್ತು ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಪೂರ್ವ ಪಾಕಿಸ್ತಾನದಿಂದ ಕೆಲವು ನಿರಾಶ್ರಿತರು ಇಲ್ಲಿಗೆ ಬಂದು ನೆಲೆಸಿದರು. ಆ ನಿರಾಶ್ರಿತರೇ ಈ ಗ್ರಾಮಕ್ಕೆ ಪಾಕಿಸ್ತಾನ ತೋಲಾ ಎಂದು ಕರೆಯುತ್ತಿದ್ದರು. ಬಾಂಗ್ಲಾದೇಶದ ರಚನೆಯ ನಂತರ ನಿರಾಶ್ರಿತರು ಈ ಗ್ರಾಮವನ್ನು ತೊರೆದರು. ಆದರೆ ಆ ಹೆಸರು ಮಾತ್ರ ಹಾಗೆಯೇ ಉಳಿಯಿತು ಎಂದೂ ಹೇಳಲಾಗುತ್ತದೆ.

ಪಾಕಿಸ್ತಾನ ಹೆಸರಿನಿಂಲೇ ತೊಂದರೆ: ತಮ್ಮ ಗ್ರಾಮಕ್ಕೆ ಪಾಕಿಸ್ತಾನ ಎಂಬ ಹೆಸರಿನಿಂದಲೇ ಇಲ್ಲಿನ ಜನರು ತೊಂದರೆಯನ್ನೂ ಎದುರಿಸುತ್ತಿದ್ದಾರೆ. ಈ ಗ್ರಾಮದಲ್ಲಿ 1,200ರಷ್ಟು ಜನಸಂಖ್ಯೆ ಇದ್ದು, ಎಲ್ಲರೂ ಬುಡಕಟ್ಟು ಸಮುದಾಯಗಳಿಗೆ ಸೇರಿದ್ದಾರೆ. ಗ್ರಾಮದ ಹೆಸರು 'ಪಾಕಿಸ್ತಾನ' ಎಂಬ ಕಾರಣಕ್ಕೆ ಮಕ್ಕಳ ಮದುವೆ ನಿಶ್ಚಯಗಳಿಗೂ ಸಮಸ್ಯೆ ಉಂಟಾಗುತ್ತದೆ. ಗ್ರಾಮ ಮಕ್ಕಳಿಗೆ ಬೇರೆ ಗ್ರಾಮಗಳ ಗಂಡು-ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಗ್ರಾಮಸ್ಥರು.

ಈ ಗ್ರಾಮದಲ್ಲಿ ಅಭಿವೃದ್ಧಿ ಕೂಡ ಮರೀಚಿಕೆಯಾಗಿದೆ. ಗ್ರಾಮಕ್ಕೆ ಸೂಕ್ತವಾದ ರಸ್ತೆ ಸಂಪರ್ಕವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 12 ಕಿ.ಮೀ. ದೂರ ಹೋಗಬೇಕು ಹಾಗೂ ಶಾಲೆ ಕೂಡ ಸುಮಾರು 2 ಕಿ.ಮೀ ದೂರದಲ್ಲಿದೆ. ಮೂಲಭೂತ ಸೌಕರ್ಯಗಳಿಂದ ಗ್ರಾಮಸ್ಥರು ವಂಚಿತರಾಗಿದ್ದಾರೆ.

ಇದನ್ನೂ ಓದಿ:ಹರ್ ಘರ್ ತಿರಂಗಾ: ಕಾರಿಗೆ ತ್ರಿವರ್ಣ ಬಳಿಸಿದ ಸೂರತ್ ಉದ್ಯಮಿ..ದಾರಿ ಉದ್ದಕ್ಕೂ ರಾಷ್ಟ್ರಧ್ವಜ ವಿತರಣೆ

ABOUT THE AUTHOR

...view details