ಹೊಸದಿಲ್ಲಿ: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕೆ ಭಾರತವು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದು, ಹಂಗೇರಿ ದೇಶದ ಬುಡಾಪೆಸ್ಟ್‌ಗೆ ಬಂದು ತಲುಪುವಂತೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಕಾರಣ ಉಕ್ರೇನ್ ನಲುಗಿ ಹೋಗಿದೆ. ಇಲ್ಲಿ ನೆಲೆಸಿರುವ ಭಾರತದ ವಿದ್ಯಾರ್ಥಿಗಳನ್ನು ತವರಿಗೆ ಕರೆತರಲು ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಶುರುಮಾಡಿದೆ. ಈಗ ಕಾರ್ಯಾಚರಣೆಯು ಕೊನೆಯ ಹಂತಕ್ಕೆ ಬಂದಿದೆ. ಈ ಬಗ್ಗೆ ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾನುವಾರ ಮಧ್ಯಾಹ್ನ ಎರಡು ಸರಣಿ ಟ್ವೀಟ್‌ಗಳನ್ನು ಮಾಡಿದೆ. ಬುಡಾಪೆಸ್ಟ್‌ನಲ್ಲಿರುವ ಹಂಗೇರಿಯಾ ಸಿಟಿ ಸೆಂಟರ್‌ಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗೆ ಬಂದು ತಲುಪುವಂತೆ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಸೂಚಿಸಿತ್ತು.
ಪ್ರಮುಖ ಪ್ರಕಟಣೆ ಹೆಸರಲ್ಲಿ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿ, ಆಪರೇಷನ್ ಗಂಗಾ ವಿಮಾನಗಳ ಹಾರಾಟದ ಕೊನೆಯ ಹಂತ ಪ್ರಾರಂಭಿಸುತ್ತದೆ. ರಾಯಭಾರ ಕಚೇರಿಯಿಂದ ವ್ಯವಸ್ಥೆ ಮಾಡಿರುವುದನ್ನು ಹೊರತುಪಡಿಸಿ ಉಳಿದ ಕಡೆ ಇರುವ ಎಲ್ಲ ವಿದ್ಯಾರ್ಥಿಗಳು @Hungariacitycentre, Rakoczi Ut 90, Budapestಗೆ 10ರಿಂದ ಮಧ್ಯಾಹ್ನ 12ರೊಳಗೆ ತಲುಪಲು ಮನವಿ ಮಾಡಲಾಗಿದೆ ಎಂದು ತಿಳಿಸಿದೆ.