ಹಾವೇರಿ: ಉಕ್ರೇನ್ನ ಖಾರ್ಕೀವ್ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಅಸುನೀಗಿದ್ದು, ಅವರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಈ ಸಂಬಂಧ ಮೃತ ನವೀನ್ ಮನೆಗೆ ದೌಡಾಯಿಸಿದ ನೂರಾರು ಜನರು ಹಾಗೂ ಸಂಬಂಧಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ರಷ್ಯಾ ಆಕ್ರಮಣಕ್ಕೆ ಭಾರಿ ಆಕ್ರೋಶ ವ್ಯಕ್ತಪಡಿಸಿದ ಜನರು, ವಿದೇಶಾಂಗ ಇಲಾಖೆ ವಿಫಲವಾಗಿದೆ. ನಮ್ಮ ಮಕ್ಕಳನ್ನು ಕರೆಸಿಕೊಳ್ಳಲು ಅವರು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ. ಈಗ ನಮ್ಮ ಮಗ ಬಾರದಲೋಕಕ್ಕೆ ತೆರಳಿದ, ಇದಕ್ಕೆ ಯಾರು ಹೊಣೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ನಮ್ಮ ಮಕ್ಕಳಿಗೆ ಭದ್ರತೆಯೇ ಇಲ್ಲ. ನಾವು ಯಾರಿಗೇ ಸಂಪರ್ಕ ಮಾಡಿದರೂ ಯಾರೂ ಸಿಕ್ತಾ ಇಲ್ಲಾ. ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಊಟ-ನೀರು ಸಹ ದೊರೆಯುತ್ತಿಲ್ಲ. ಬಹಳ ಸಂದಿಗ್ಧತೆಯಲ್ಲಿ ನಮ್ಮ ಮಕ್ಕಳು ಇದ್ದಾರೆ. ರಷ್ಯಾ ಬಾರ್ಡರ್ ಓಪನ್ ಆದ್ರೆ ನಮ್ಮ ಮಕ್ಕಳು ಬದುಕುತ್ತಾರೆ. ಇಲ್ಲ ಅಂದ್ರೆ ಎಲ್ಲಾ ಮಕ್ಕಳು ಸಾಯುತ್ತಾರೆ ಎಂದು ವಿದ್ಯಾರ್ಥಿಗಳ ಪಾಲಕರು ಗೋಗರೆಯುತ್ತಿದ್ದಾರೆ.